ದಾವಣಗೆರೆ, ಜ.14- ಎಚ್.ಕೆ.ಆರ್ ಬಣದ ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಎಂ. ಸರ್ವಮ್ಮ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಜೆ.ಎಂ ಉಮಾ, ಸಿ.ಬಿ ಕಾಳಮ್ಮ (ಖಜಾಂಚಿ), ಸುಧಾ, ಹೊನ್ನಮ್ಮ, ಇಂದ್ರಮ್ಮ (ಉಪಾಧ್ಯಕ್ಷೆ), ಚೌಡಮ್ಮ, ಪುಷ್ಪ ನೇರ್ಲಿಗೆ, ಮಂಜುಳಾ ಐಗೂರ್ (ಸಹ ಕಾರ್ಯದರ್ಶಿ) ಮತ್ತು ಸಂಘಟನಾ ಕಾರ್ಯದರ್ಶಿಯಾಗಿ ಗಾಯತ್ರಿ, ಆಯುಷ್ಯ, ಸುನಿತಾ, ರೂಪ, ಭಾಗ್ಯ ಅವರು ಆಯ್ಕೆಯಾಗಿದ್ದಾರೆ.
ಸಂಘಟನೆಯ ಜಿಲ್ಲಾ ಮುಖಂಡರಾದ ವಿಶಾಲಾಕ್ಷಿ ಮೃತ್ಯುಂಜಯ ಹಾಗೂ ಕುಂದುವಾಡ ರೇಣುಕಮ್ಮ ಅವರ ಉಪಸ್ಥಿತಿಯಲ್ಲಿ ಪದಾಧಿಕಾರಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಇದೇ ವೇಳೆ ಸರ್ಕಲ್ ಲೀಡರ್‌ಗಳನ್ನು ಆಯ್ಕೆ ಮಾಡಲಾಯಿತು.