ಎಲೆಬೇತೂರು ತರಳಬಾಳು ಶಾಲೆಯ ವಿದ್ಯಾರ್ಥಿ ಸಂಘದ ಕಾರ್ಯಕ್ರಮದಲ್ಲಿ ಸಲಹಾ ಸಮಿತಿ ಅಧ್ಯಕ್ಷ ಎಂ.ಬಸವರಾಜಪ್ಪ
ಎಲೆಬೇತೂರು, ಜ. 12 ಬಾಲ್ಯದಲ್ಲಿ ಕಲಿತ ಸಂಸ್ಕಾರಗಳು ಜೀವನ ಪೂರ್ತಿ ಜೊತೆಯಾಗಿ ಬರುತ್ತವೆ. ಒಳ್ಳೆಯ ಸಂಸ್ಕಾರಗಳನ್ನು ಕಲಿಯಲು ಶಾಲಾ ಅವಧಿ ಸುವರ್ಣ ಕಾಲ ಎಂದು ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆಯ ಸ್ಥಳಿಯ ಸಲಹಾ ಸಮಿತಿಯ ಅಧ್ಯಕ್ಷ ಎಂ.ಬಸವರಾಜಪ್ಪ ಹೇಳಿದರು.
ಇಲ್ಲಿನ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ ಮತ್ತು ಶ್ರೀ ತರಳಬಾಳು ಆಂಗ್ಲ ಮಾಧ್ಯಮ ನರ್ಸರಿ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 2024-25 ನೇಯ ಸಾಲಿನ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿವೆ. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಶಾಲಾ ವಾರ್ಷಿಕೋತ್ಸವ ವನ್ನು ಆಯೋಜಿಸುತ್ತಾ ಬರಲಾಗಿದೆ ಎಂದು ಅವರು ತಿಳಿಸಿದರು. ಶಾಲೆಯ ಹಳೆಯ ವಿದ್ಯಾರ್ಥಿಗಳು ಓದಿದ ಶಾಲೆಯನ್ನು ಮರೆಯದೇ ಶಾಲೆಗೆ 55 ಇಂಚಿನ ಟಿವಿ ಕೊಡಿಸಿರುವುದು ನಿಜಕ್ಕೂ ಅಭಿನಂದನೀಯವಾದುದು. ಇದೇ ರೀತಿ ಇನ್ನುಳಿದ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಬೇಕಾದ ನೆರವನ್ನು ನೀಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಲೆಯ ಉಪಾಧ್ಯಕ್ಷ ಕೆ ಜಿ ಶೇಖರಪ್ಪ ಮಾತನಾಡಿ, ವಾರ್ಷಿಕೋತ್ಸವ ಶಾಲೆಯ ವರ್ಷದ ಕಾರ್ಯಚಟುವಟಿಕೆಗಳ ಕೈಗನ್ನಡಿ ಇದ್ದಂತೆ. ವಿದ್ಯೆ ಕಲಿಯುವುದು ನೌಕರಿಗಾಗಿ ಅಲ್ಲ, ಸುಂದರ ಬದುಕಿಗಾಗಿ, ಉತ್ತಮ ಪ್ರಜೆಗಳಾಗಲು. ಶಿಕ್ಷಕರು ವಿದ್ಯಾರ್ಥಿಗಳನ್ನು ದಂಡಿಸಿದರೆ ಶಿಕ್ಷಕರನ್ನು ಮರು ಪ್ರಶ್ನಿಸಬಾರದು. ಅವರು ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲೇ ದಂಡಿಸುತ್ತಾರೆ ಎನ್ನುವುದನ್ನು ಪೋಷಕರು ಮರೆಯಬಾರದು ಎಂದರು.
ವಿದ್ಯಾರ್ಥಿ ಸಂಘಗಳ ಸಮಾರೋಪ ಭಾಷಣ ಮಾಡಿದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಹೆಚ್. ಕೆ. ಲಿಂಗರಾಜ್ ಮಾತನಾಡಿ, ನಾನು ಕಳೆದ ಮೂವತ್ತು ವರ್ಷಗಳ ಹಿಂದೆ ಈ ಶಾಲೆಗೆ ಶಿಕ್ಷಣಾಧಿಕಾರಿಯಾಗಿ ಭೇಟಿ ನೀಡಿದ್ದೆ. ಅಂದಿನ ಶಾಲೆಗೂ ಇಂದಿನ ಶಾಲೆಗೂ ಅಜಗಜಾಂತರ ವ್ಯತ್ಯಾಸವನ್ನು ಕಾಣುತ್ತಿದ್ದೇನೆ. ದಾನಿಗಳ ತವರೂರು ಎಲೆಬೇತೂರು. ಈ ಶಾಲೆಗೆ ಸ್ಥಳ ದಾನ ಮಾಡಿದ ಕುರುವೆತ್ತಪ್ಪನವರ ಮನೆತನವನ್ನು ಕೃತಜ್ಞತೆಯಿಂದ ನೆನಪಿಸಿಕೊಳ್ಳ ಬೇಕು. ದಾನ ಪಡೆದುಕೊಳ್ಳುವುದಕ್ಕಿಂತ ದಾನ ನೀಡುವುದು ಹೆಚ್ಚು ಸಂತೋಷದಾಯಕವಾದುದು ಎಂದರು.
ತರಳಬಾಳು ಶಾಲೆಯ ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಹೆಚ್. ಬಸವರಾಜಪ್ಪ, ತಿಪ್ಪಗೊಂಡನಹಳ್ಳಿ ಪ್ರಗತಿಪರ ರೈತರಾದ ಸುಮ ಯತೀಶ್, ದಾಸೋಹಿಗಳಾದ ರಾಂಪುರದ ಆರ್ ಜಿ ನರೇಂದ್ರ, ಕಲ್ಪನಹಳ್ಳಿಯ ಡಾ. ಎಂ.ಕೆ. ನಾಗ ಭೂಷಣ್ ಮತ್ತು ಎಲೆಬೇತೂರು ಗ್ರಾ.ಪಂ. ಅಧ್ಯಕ್ಷರಾದ ಕೆ.ಎಂ.ರೇವಣಸಿದ್ಧಪ್ಪ ಅವರುಗಳನ್ನು ಅಭಿನಂದಿಸಲಾಯಿತು.
ದಾಸೋಹಿಗಳ ಪರವಾಗಿ ಡಾ. ನಾಗಭೂಷಣ್, ವಿದ್ಯಾರ್ಥಿಗಳ ಮಿತ್ರಕೂಟದ ಪರವಾಗಿ ಹಿರಿಯ ವಿದ್ಯಾರ್ಥಿ ಮಂಜುನಾಥ್ ಮಾತನಾಡಿದರು.
ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಡಿ ಎಸ್ ಸುಪ್ರಭೆ, (ಕನ್ನಡ ಮಾಧ್ಯಮ) ಶೇ. 98.5 (ದಾವಣಗೆರೆ ಜಿಲ್ಲೆಯ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ), ಟಿ ವಿದ್ಯಾ, (ಕನ್ನಡ ಮಾಧ್ಯಮ) ಶೇ. 88., ಭೂಮಿಕಾ ಎನ್ ಗದುಗೇರ (ಕನ್ನಡ ಮಾಧ್ಯಮ) ಶೇ. 86. ಮತ್ತು ಕೆ ಆರ್ ಅನನ್ಯ, (ಆಂಗ್ಲ ಮಾಧ್ಯಮ) 93.60, ಹೆಚ್ ಪಿ ಆದರ್ಶ, (ಆಂಗ್ಲ ಮಾಧ್ಯಮ) 88.32, ಟಿ ನಿತಿನ್, (ಆಂಗ್ಲ ಮಾಧ್ಯಮ) 80.96 ಇವರನ್ನು ಅಭಿನಂದಿಸಲಾಯಿತು.
ವೇದಿಕೆಯ ಮೇಲೆ ಉಭಯ ಶಾಲಾ ಸ್ಥಳಿಯ ಸಲಹಾ ಸಮಿತಿಯ ಬಿ. ವಿರೂಪಾಕ್ಷಪ್ಪ, ಎಸ್. ಎಂ.ಮರುಳಸಿದ್ಧಪ್ಪ, ಕೆ.ಎನ್ ಸೋಮಶೇಖರಪ್ಪ, ಬಿ. ಪ್ರಭು, ಮರಡಿ ಅಶೋಕ್ ಕುಮಾರ್, ಕೆ.ಜಿ ಚನ್ನಪ್ಪ, ಡಾ. ಎಂ. ಕೆ ನಾಗಭೂಷಣ್, ಹಳ್ಳಿಕೇರಿ ರಾಜಣ್ಣ, ಹೆಚ್. ಎಸ್. ಚೇತನ್ ಕುಮಾರ್, ಮಹೇಶ್ ಎಲಿಗಾರ್, ಮಾಗೋಡು ಕೊಟ್ರೇಶ್, ಷಡಕ್ಷರಪ್ಪ ಬೇತೂರು, ಮಠದ ಬಸವರಾಜಯ್ಯ, ಆಶಾ ನಾರಪ್ಪ, ನೀಲವಾಡಿ ಷಣ್ಮುಖಪ್ಪ, ಡಿ.ಎಸ್ ಜಯಪ್ರಕಾಶ್, ಆರ್. ಜಿ ನರೇಂದ್ರ, ಎಲೆಬೇತೂರು ಗ್ರಾಮಪಂಚಾಯಿತಿ ಅಧ್ಯಕ್ಷ ಕೆ. ಎಂ. ರೇವಣಸಿದ್ಧಪ್ಪ ಮೊದಲಾದವರು ಉಪಸ್ಥಿತರಿದ್ದರು.
ಶಿಕ್ಷಕಿ ಉಷಾ ವಚನ ಗೀತೆ ಹಾಡಿದರು. ಮುಖ್ಯೋಪಾಧ್ಯಾಯಿನಿ ಎಂ.ಬಿ. ಪ್ರೇಮ ಸ್ವಾಗತಿ ಸಿದರು. ಪ್ರಾಸ್ತಾವಿಕವಾಗಿ ಅಧ್ಯಾಪಕ ಡಾ. ಎಸ್. ಓ. ಷಣ್ಮುಖಪ್ಪ ಮಾತನಾಡಿದರು. ವಿದ್ಯಾರ್ಥಿಗಳಾದ ಆರ್. ಆಶಾ ಮತ್ತು ಬಿ. ಸಿಂಧು ವಾಚಿಸಿದರು. ಅಧ್ಯಾಪಕ ಹೆಚ್. ಎಸ್. ದ್ಯಾಮೇಶ್, ಎಸ್. ಆರ್. ನಾಗರಾಜ್ ಮತ್ತು ಚಿನ್ಮಯಿ ನಿರೂಪಿಸಿದರು. ಮುಖ್ಯ ಶಿಕ್ಷಕಿ ಬಿ. ಎಂ. ಶಶಿಕಲಾ ವಂದಿಸಿದರು.