ನಗರದ ಅಕ್ಕಮಹಾದೇವಿ ಸಮಾಜದಲ್ಲಿ ಇಂದು ಬನದ ಹುಣ್ಣಿಮೆ ಕಾರ್ಯಕ್ರಮ

ಅಕ್ಕಮಹಾದೇವಿ ಸಮಾಜದಲ್ಲಿ ಇಂದು ಸಂಜೆ‌ 5.30 ಕ್ಕೆ ಬನದ ಹುಣ್ಣಿಮೆ ಕಾರ್ಯಕ್ರಮ ಏರ್ಪಡಿಸಲಾಗಿದೆ. 

ಶ್ರೀಮತಿ ಕೆ. ಸುಶೀಲಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀಮತಿ ದೊಗ್ಗಳ್ಳಿ ಸುವರ್ಣಮ್ಮ ಅವರ ಉಪಸ್ಥಿತಿಯಲ್ಲಿ ಶ್ರೀಮತಿ ಶೋಭಾ ಕಣವಿ ಧನುರ್ಮಾಸ ವಿಶೇಷತೆ ಬಗ್ಗೆ ಮಾತನಾಡುವರು. ಶ್ರೀಮತಿ ಶಾಂತ ಯಾವಗಲ್ ಅವರಿಂದ ದೇವಿ ಸ್ತೋತ್ರ ಗಾಯನ, ಶ್ರೀಮತಿ ಸೌಭಾಗ್ಯ ಹಿರೇಮಠ್ ಬನದ ಹುಣ್ಣಿಮೆ ಬಗ್ಗೆ ಮಾತನಾಡುವರು. ಶ್ರೀಮತಿ ನೀಲಗುಂದ ಜಯಮ್ಮ ನವರಿಂದ  ಚಿಂತನ – ಮಂಥನ  ನಡೆಯಲಿದೆ ಎಂದು  ಹುಣ್ಣಿಮೆ ಸಂಚಾಲಕರಾದ  ಶ್ರೀಮತಿ ಜಯದೇವಮ್ಮ ಹಾಗು  ಉಮಾ  ಎಮ್ಮಿ  ತಿಳಿಸಿದ್ದಾರೆ.

error: Content is protected !!