ನಗರದೇವತೆ ತುಂಗಾಜಲ ಚೌಡೇಶ್ವರಿ ಹಾಗೂ ಗಂಗಾಜಲ ಚೌಡೇಶ್ವರಿ ದೇವಿಯರ ಜಾತ್ರಾ ಮಹೋತ್ಸವವು ಇಂದಿನಿಂದ ಇದೇ ದಿನಾಂಕ 18 ಶನಿವಾರದವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಬೆಳಿಗ್ಗೆ 10 ಗಂಟೆಗೆ ತುಂಗಾಜಲ ಚೌಡೇಶ್ವರಿ ದೇವಿಯ ಮೆರವಣಿಗೆ ಮಾರುತಿ ನಗರದ ಊರಮನೆಯಿಂದ ಹೊರಟು, ನಗರದ ಸಂಪೂರ್ಣ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಿ, ನಾಳೆ ದಿನಾಂಕ 14 ರ ಮಂಗಳವಾರ ಬೆಳಿಗ್ಗೆ ಜಾತ್ರಾ ಸ್ಥಳ ತುಂಗಾಜಲ ಆಲಯದಲ್ಲಿ ವಿರಾಜಮಾನಳಾಗುವಳು.
ಅದೇ ರೀತಿ ಸೋಮವಾರ ಸಂಜೆ ತಳವಾರ ಓಣಿಯ ಊರ ಮನೆಯಿಂದ ಹೊರಡುವ ಚೌಡೇಶ್ವರಿ ದೇವಿ ಸಹ ಮಂಗಳವಾರ ಬೆಳಿಗ್ಗೆ ಜಾತ್ರಾಸ್ಥಳ ತುಂಗಾಜಲದ ಆಲಯದಲ್ಲಿ ಪ್ರತಿಷ್ಠಾಪನೆಗೊಳ್ಳುವಳು.
ದಿನಾಂಕ 18 ರ ಶನಿವಾರವದರೆಗೆ ಉಡಿ ತುಂಬುವ, ಬಳೆ ಇಡಿಸುವ, ಹರಕೆ ಸಲ್ಲಿಸುವ, ಓಕುಳಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಎರಡೂ ದೇವಾಲಯಗಳಲ್ಲಿ ನಡೆಯಲಿದ್ದು, ಇಬ್ಬರು ದೇವತೆಯರು ಶನಿವಾರದಂದು ಮರಳಿ ಊರ ಮನೆಗಳಿಗೆ ಆಗಮಿಸುವರು.
ದೇವಿಯರಿಗೆ ಮಂಗಳವಾರ ಸಸ್ಯಹಾರಿ ಎಡೆ, ಬುಧವಾರ ಮಾಂಸಾಹಾರದ ಎಡೆ ಕೊಡುವ ಪದ್ದತಿ ಭಕ್ತರಿಂದ ನಡೆದಿರುತ್ತದೆ.