ನಗರದ ಶ್ರೀ ಗಾಯತ್ರಿ ಪರಿವಾರದಿಂದ ಬನದ ಹುಣ್ಣಿಮೆ ಅಂಗವಾಗಿ ನಗರದ ಜಯದೇವ ವೃತ್ತದಲ್ಲಿರುವ ಶ್ರೀ ಶಂಕರ ಮಠದಲ್ಲಿ ಇಂದು ಸಾಮೂಹಿಕ ಶ್ರೀ ಗಾಯತ್ರಿ ಪೂಜೆ, ಉಪಾಸನೆ ನಡೆಯಲಿದೆ ಎಂದು ಶ್ರೀ ಗಾಯತ್ರಿ ಪರಿವಾರದ ಅಧ್ಯಕ್ಷ ಡಾ. ರಮೇಶ್ ಪಟೇಲ್ ತಿಳಿಸಿದ್ದಾರೆ.
ಪರಿವಾರದ ಸಂಚಾಲಕರಾದ ವಿ. ವೀರಭದ್ರಪ್ಪ ಮತ್ತು ಕುಟುಂಬದವರು ಈ ಬಾರಿಯ ಪೂಜಾ ಸೇವಾಕರ್ತರಾಗಿದ್ದಾರೆ ಎಂದು ಪರಿವಾರದ ಪ್ರಧಾನ ಕಾರ್ಯದರ್ಶಿ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.