ಡಿಸಿಎಂ ಲೇಔಟ್ ಹಿಂಭಾಗದ ರಾಜೇಂದ್ರ ಬಡಾವಣೆಯಲ್ಲಿರುವ ಶ್ರೀ ಬನಶಂಕರಿ ದೇವಿಯ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಪ್ರಯುಕ್ತ 11ನೇ ವರ್ಷದ ಜಾತ್ರಾ ಮಹೋತ್ಸವವನ್ನು ಇಂದು ಹಮ್ಮಿಕೊಳ್ಳಲಾಗಿದೆ.
ಇಂದು ಬೆಳಗ್ಗೆ 6 ಗಂಟೆಗೆ ಪಂಚಾಮೃತ ಅಭಿಷೇಕ, ಬೆಳಿಗ್ಗೆ 10.30 ರಿಂದ ವಿಶೇಷ ಅಲಂಕಾರ ನೆರವೇರಲಿದೆ. ನಂತರ ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದ್ದು, ಮಧ್ಯಾಹ್ನ 3.30ಕ್ಕೆ ಶ್ರೀ ಬನಶಂಕರಿ ದೇವಿಯ ಮೆರವಣಿಗೆ ನಿಟ್ಟುವಳ್ಳಿಯ ರಾಜ ಬೀದಿಗಳಲ್ಲಿ ಸಾಗಲಿದೆ.