ದಾವಣಗೆರೆ, ಜ.12- ನಗರದ ಸೀತಮ್ಮ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಅದಮ್ಯ ಕಲಾ ಸಂಸ್ಥೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅದಮ್ಯ ಆರ್ಟ್ಸ್ ಫೌಂಡೇಷನ್‍ನ ಸಹಯೋಗದೊಂದಿಗೆ ಕನ್ನಡ ಗೀತೆಗಳ `ನುಡಿ ಹಬ್ಬ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪತ್ರಕರ್ತ ಬಾ.ಮ. ಬಸವರಾಜಯ್ಯ ಕಾರ್ಯಕ್ರಮ ಉದ್ಘಾಟಿಸಿ, ಕನ್ನಡ ಭಾಷೆಯ ಹಿರಿಮೆ ಹಾಗೂ ಅದನ್ನು ಉಳಿಸಿ ಬೆಳೆಸುವ ಬಗ್ಗೆ ವಿವರವಾಗಿ ಮಾತನಾಡಿದರು.
ನಂತರ ಪೃಥ್ವಿ ಇವರ ವೀಣಾವಾದನ, ಕಾಂತರಾಜು ಚಾಮರಾಜನಗರ ಇವರ ಸುಗಮ ಸಂಗೀತ, ಅರುಣ್ ಎಸ್. ತೋರವಳ್ಳಿ ಮತ್ತು ಶ್ರೀ ವೀರೇಶ್ವರ ಪುಣ್ಯಾಶ್ರಮದ ಕಲಾವಿದರ ಹಾಡುಗಾರಿಕೆ ನೆರೆದವರ ಮನಸೂರೆಗೊಂಡಿತು. ಸದಾಶಿವ ಹೂಗಾರ್ ತಬಲಾ ಸಾಥ್ ನೀಡಿದರೆ, ಹಾರ್ಮೋನಿಯಂನಲ್ಲಿ ಮಹಾಂತೇಶ್ ಗದಗ ಸಾಥ್ ನೀಡಿದರು.
ಅಧ್ಯಕ್ಷತೆಯನ್ನು ಅದಮ್ಯ ಕಲಾ ಸಂಸ್ಥೆ ಅಧ್ಯಕ್ಷ ಡಾ. ಎ.ಎಂ. ಶಿವಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರೆಡ್‍ಕ್ರಾಸ್‌ನ ರವಿಕುಮಾರ್ ಎ.ಜೆ., ಇನಾಯತ್ ವುಲ್ಲಾ, ಸೀತಮ್ಮ ಕಾಲೇಜಿನ ಉಪ ಪ್ರಾಚಾರ್ಯ ಮಂಜಪ್ಪ, ಸಂಸ್ಥೆಯ ಅನಿತಾ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು. ಗುರು ರಾಜ್ ಪೂಜಾರ್ ಕಾರ್ಯಕ್ರಮ ನಿರೂಪಿಸಿದರೆ, ಶ್ರೀಮತಿ ಗೀತಾ ಮಾಲತೇಶ್ ಸ್ವಾಗತಿಸಿದರು.