ನಿವೇಶನ ಮತ್ತು ವಸತಿ ರಹಿತರ ಕಾರ್ಯಾಗಾರ
ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಅವರು ಇಂದು ನಗರಕ್ಕೆ ಆಗಮಿಸಲಿದ್ದಾರೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ತಿಳಿಸಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ಅಶೋಕ ರಸ್ತೆಯಲ್ಲಿರುವ ಪಂಪಾಪತಿ ಭವನದಲ್ಲಿ ನಿವೇಶನ ಮತ್ತು ವಸತಿ ರಹಿತರ ಸೌಲಭ್ಯ ಪಡೆಯುವ ಮಾಹಿತಿ ಕಾರ್ಯಾಗಾರವನ್ನು ಸಿಪಿಐ ರಾಜ್ಯ ಕಾರ್ಯದರ್ಶಿ ಕಾಂ. ಸಾತಿ ಸುಂದರೇಶ್ ಉದ್ಘಾಟಿಸುವರು.
ಮಾಹಿತಿ ಕಾರ್ಯಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಕಾಂ. ಕೆಎಸ್ ಜನಾರ್ಧನ, ಕಾಂ. ಎಚ್.ಎಂ. ಸಂತೋಷ್ ರವರುಗಳು ಕೂಡ ಆಗಮಿಸುವರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು, ಸಹಕಾರ್ಯದರ್ಶಿ ಕಾಂ. ಹೆಚ್.ಜಿ. ಉಮೇಶ್, ಖಜಾಂಚಿ ಕಾಂ ಮಹಮ್ಮದ್ ರಫೀಕ್ ಸೇರಿದಂತೆ ಸಿಪಿಐ ನ ಜಿಲ್ಲಾ ಇತರೆ ಮುಖಂಡರುಗಳು ಉಪಸ್ಥಿತರಿರುವರು.