ಕೊಂಡಜ್ಜಿ ರಸ್ತೆಯ ವಿನಾಯಕ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ ಕಾರ್ಯಕ್ರಮವು ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಶಾಲಾ ಕಾರ್ಯದರ್ಶಿ ಡಾ. ವೀರೇಶ್ ಬಿ. ಬಿರಾದಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಸೇಂಟ್ ಜಾನ್ಸ್ ಕಾನ್ವೆಂಟ್ ಕಾರ್ಯದರ್ಶಿ ಉಮಾಪತಯ್ಯ, ಎಜು ಏಷ್ಯಾ ಕಾರ್ಯದರ್ಶಿ ಎಂ.ಎನ್. ಸಂತೋಷ್ ಕುಮಾರ್, ಅತ್ತಿಗೆರೆಯ ನಿರ್ಮಲಾ ಕೇಸರಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎ.ಎನ್. ಪ್ರಸನ್ನ ಕುಮಾರ್, ನಂದಗೋಕುಲ ಸ್ಕೂಲ್ ಕಾರ್ಯದರ್ಶಿ ಬಿ.ಅನುಸೂಯ, ಆದಿಕೇಶವ ಅಕಾಡೆಮಿ ಸಿಇಒ ಜಿ.ಡಿ. ಜ್ಯೋತಿಕುಮಾರ್, ಯರಗುಂಟೆ ಕ್ಲಸ್ಟರ್ ಸಿಆರ್‌ಪಿ ಸೈಫುಲ್ಲಾ, ವಕೀಲರಾದ ಎಸ್.ಸಿ. ಚನ್ನಮಲ್ಲೇಶ್, ಪೊಲೀಸ್ ಇನ್‌ಸ್ಪೆಕ್ಟರ್ ರವಿನಾಯ್ಕ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸಮನ್ವಯಾಧಿಕಾರಿ ಡಾ. ಕೆ. ಬಸವರಾಜಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.