ವಿದ್ಯಾರ್ಥಿಗಳು ಹಿಂಜರಿಕೆ ಮನೋಭಾವ ತೊರೆಯಲಿ

ವಿದ್ಯಾರ್ಥಿಗಳು ಹಿಂಜರಿಕೆ ಮನೋಭಾವ ತೊರೆಯಲಿ

ಪ್ರಾಯೋಜಿತ ವಿಶ್ವವಿದ್ಯಾನಿಲಯ ಮಟ್ಟದ ಚರ್ಚಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಪ್ರೊ. ಎಸ್‌. ಸುಚಿತ್ರಾ

ದಾವಣಗೆರೆ, ಜ.12- ವಿದ್ಯಾರ್ಥಿಗಳು ಹಿಂಜರಿಕೆ ಮನೋಭಾವ ತೊರೆದು ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ಹೊಸ-ಹೊಸ ವಿಚಾರಗಳನ್ನು ತಿಳಿಯಲು ಸಾಧ್ಯ ಎಂದು ದಾವಣಗೆರೆ ವಿವಿಯ ಪ್ರೊ.ಎಸ್‌. ಸುಚಿತ್ರಾ ಹೇಳಿದರು.

ಇಲ್ಲಿನ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿಯಮಿತದಿಂದ ಪ್ರಾಯೋಜಿತ ವಿಶ್ವವಿದ್ಯಾನಿಲಯ ಮಟ್ಟದ ಸಹಕಾರ ವಿಷಯದ ಕುರಿತು ನಡೆದ ಚರ್ಚಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ಪರ್ಧೆಗಳಲ್ಲಿ ಸೋಲು, ಗೆಲುವು ಸಹಜ, ಮಕ್ಕಳು ಸಕ್ರೀಯವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಿದರೇ ಅವರಲ್ಲಿ ಅಡಗಿರುವ ಜ್ಞಾನ ಭಂಡಾರ ವೃದ್ಧಿಸುತ್ತದೆ. ಹಾಗಾಗಿ ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ವಿದ್ವತ್ತನ್ನು ಹೊರ ಹಾಕಲು ಚರ್ಚಾ ಸ್ಪರ್ಧೆಗಳು ಉತ್ತಮ ವೇದಿಕೆ ಎಂದರು.

ಸಹಕಾರ ಮಂಡಳಿಯ ನಿರ್ದೇಶಕ ಶ್ರೀನಿವಾಸ್‌ಮೂರ್ತಿ ಮಾತನಾಡಿ, ಸಹಕಾರ ಕ್ಷೇತ್ರ ಎಂಬುದು ಕೊನೆಯೇ ಇಲ್ಲದ ವಿಷಯ, ಯಾವ ವಿಷಯವಾದರೂ ಸಹಕಾರ ಕ್ಷೇತ್ರದ ಅಡಿಯಲ್ಲಿ ಬರುತ್ತವೆ. ಸಹಕಾರ ಕ್ಷೇತ್ರವು ಅನೇಕ ಆಯಾಮಗಳಲ್ಲಿ ಬೆಳವಣಿಗೆಯಾಗುತ್ತಿದೆ ಎಂದು ಹೇಳಿದರು.

ಕೊಟ್ಟೂರಿನ ಇಂದು ಪದವಿ ಕಾಲೇಜಿನ ಪ್ರಾಧ್ಯಾಪಕ ಹಾಗೂ ಸಾಹಿತಿ ಪದ್ಮಣ್ಣ ಹಿರೇಗಿಡ್ಡಪ್ಪನವರು ವಿಶೇಷ ಉಪನ್ಯಾಸ ನೀಡಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಈ ವೇಳೆ ಕುಲಸಚಿವ ಪ್ರೊ.ಸಿ.ಕೆ ರಮೇಶ, ಡಾ.ಯು.ಎಸ್. ಮಹಾಬಲೇಶ್ವರ, ಡಾ.ಸಿದ್ಧಪ್ಪ ಭೀ. ಕಕ್ಕಳಮೇಲಿ, ಡಾ.ನಾಗಭೂಷಣ್‌ಗೌಡ, ಹಣಕಾಸು ಅಧಿಕಾರಿ ಡಿ. ಮುದ್ದನಗೌಡ್ರ, ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟದ ಸಿಇಒ ಹಾಲಪ್ಪ ಕೋಡಿಹಳ್ಳಿ ಇದ್ದರು.

error: Content is protected !!