ಕ್ರೀಡೆ ವಿದ್ಯಾರ್ಥಿಗಳ ಜೀವನದಲ್ಲಿ ಸಹಾಯಕಾರಿ

ಕ್ರೀಡೆ ವಿದ್ಯಾರ್ಥಿಗಳ ಜೀವನದಲ್ಲಿ ಸಹಾಯಕಾರಿ

ಬಸವಪ್ರಭು ಸ್ವಾಮೀಜಿ

ದಾವಣಗೆರೆ, ಜ.12- ಸಾಹಸ ಕ್ರೀಡೆ ವಿದ್ಯಾರ್ಥಿಗಳ ಜೀವನದಲ್ಲಿ ತುಂಬಾ ಸಹಾಯಕಾರಿಯಾಗುತ್ತದೆ. ಕೇವಲ ಪುಸ್ತಕಕ್ಕೆ ಅಂಟಿಕೊಳ್ಳಬೇಡಿ. ವಿದ್ಯೆ ಎಷ್ಟು ಮುಖ್ಯವೋ ಕ್ರೀಡೆಯೋ ಅಷ್ಟೇ ಮುಖ್ಯ ಎಂದು  ವಿರಕ್ತಮಠದ ಬಸವಪ್ರಭು ಸ್ವಾಮೀಜಿ ತಿಳಿಸಿದರು.

ಅವರು ನಗರದ ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆಮಿ ವತಿಯಿಂದ 2025ರ ಪಾಕೆಟ್ ಕ್ಯಾಲೆಂಡರ್ ಬಿಡುಗಡೆ ಮಾಡಿ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಗೌರವಾಧ್ಯಕ್ಷ ಹೆಚ್.ಬಿ. ಮಂಜುನಾಥ್ ಮಾತನಾಡಿ,  ಪರಿಸರ ಮತ್ತು ಸಾಹಸಕ್ಕೂ  ಸಂಬಂಧವಿದೆ. ಸಾಹಸ ಕ್ರೀಡೆಗಳು ಬೆಟ್ಟ, ಗುಡ್ಡ, ಕಾಡು, ಜರಿ ತೊರೆ, ನೀರು ಗಾಳಿ ಹೀಗೆ ಪರಿಸರ ಸವಿಯುತ್ತಾ  ಸಾಹಸ ಮಾಡಬಹುದು ಪರಿಸರ ಉಳಿಸಿ ಬೆಳೆಸಿ ಎಂದು ಮಾತಾನಾಡಿದರು. 

ಈ ಸಂದರ್ಭದಲ್ಲಿ  ಅಧ್ಯಕ್ಷ ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಎನ್. ಕೆ. ಕೊಟ್ರೇಶ್, ಸಹ ಕಾರ್ಯದರ್ಶಿ ಪಂಚಾಕ್ಷರಿ, ಸದಸ್ಯರಾದ ಜಿ.ಟಿ. ಮಲ್ಲೇಶ್, ಕಾಶಿನಾಥ್, ನವೀನ್, ಪವನ್, ಪೂಜಾ,  ಶೋಭಾ, ಸನ್ನಿಧಿ ಹಾಗೂ ರವಿತೇಜ ಟೆಕ್ಸ್‌ಟೈಲ್ಸ್‌ನ ರುದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.    

error: Content is protected !!