ದಾವಣಗೆರೆ, ಜ. 10 – ಚೌಕಿಪೇಟೆಯಲ್ಲಿರುವ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಪಂಡಿತ್ ಪುಟ್ಟರಾಜ ಕವಿ ಗವಾಯಿ ವಿರಚಿತ ಕಲಬುರಗಿಯ ಮಹಾದಾಸೋಹಿ ಶರಣ ಬಸವೇಶ್ವರರ ಪುರಾಣ ಕಾರ್ಯಕ್ರಮದಲ್ಲಿ ನಾಡಿದ್ದು ದಿನಾಂಕ 12 ರ ಭಾನುವಾರ ಶ್ರೀ ಶರಣ ಬಸವೇಶ್ವರರ ವಿವಾಹ ಮಹೋತ್ಸವ ನಡೆಯಲಿದೆ.
ಇದೇ ದಿನಾಂಕ 16ರಂದು 25 ತುಲಾಭಾರ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪುರಾಣ ಪ್ರವಚನ ಸಮಿತಿಯ ಅಜ್ಜಂಪುರ ಶೆಟ್ರು ಮೃತ್ಯುಂಜಯ ಅವರು ತಿಳಿಸಿದರು. ಪ್ರತಿದಿನ ಸಂಜೆ 6.30 ರಿಂದ 9 ರವರಗೆ ಪುರಾಣ ಪ್ರವಚನ ನಡೆಯಲಿದೆ.