ಕೊಟ್ಟೂರು : ಭೂ-ದಾಖಲೆ ಡಿಜಿಟಲೀಕರಣಕ್ಕೆ ಚಾಲನೆ

ಕೊಟ್ಟೂರು : ಭೂ-ದಾಖಲೆ ಡಿಜಿಟಲೀಕರಣಕ್ಕೆ ಚಾಲನೆ

ಕೊಟ್ಟೂರು, ಜ.10- ಭೂ-ಸುರಕ್ಷಾ ಯೋಜನೆ ಅಡಿ ಇಲ್ಲಿನ ತಾಲ್ಲೂಕು ಕಚೇರಿಯ ಭೂ-ದಾಖಲೆಗಳನ್ನು ಡಿಜಿಟಲೀಕರಣ ಗೊಳಿಸುವ ಕಾರ್ಯಕ್ಕೆ ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜ ನಾಯ್ಕ ಗುರುವಾರ ವಿಧ್ಯುಕ್ತ ಚಾಲನೆ ನೀಡಿದರು. ಶಿಥಿಲಾವಸ್ಥೆಯಲ್ಲಿರುವ ದಾಖಲೆಗಳನ್ನು ಶಾಶ್ವತವಾಗಿ ಉಳಿಸಲು, ನಕಲಿ ದಾಖಲೆ ಸೃಷ್ಟಿಸಲು ಅವಕಾಶ ಇಲ್ಲದಂತೆ ಸ್ವತಃ ನಾಗರಿಕರೇ ಆನ್‌ಲೈನ್‌ ಮೂಲಕ ತಮ್ಮ ದಾಖಲೆ ನೋಡಲು ಅನುವು ಮಾಡಿಕೊಡಲು ಈ ಯೋಜನೆ ಸಹಾಯಕವಾಗಲಿದೆ ಎಂದು ಶಾಸಕರು ತಿಳಿಸಿದರು.

ಕರ್ನಾಟಕ ಸರ್ಕಾರ ಆರಂಭಿಸಿರುವ ಈ ಯೋಜನೆ ಮಹತ್ವಾಕಾಂಕ್ಷಿಯಾಗಿದ್ದು, ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪಕ್ಕೆ ಪರಿವರ್ತಿಸಿ, ಸಾರ್ವಜನಿ ಕರಿಗೆ ಸುಲಭವಾಗಲಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ನಂದಿಪುರ ಪುಣ್ಯ ಕ್ಷೇತ್ರದ ಡಾ. ಮಹೇಶ್ವರ ಶ್ರೀಗಳು, ಸ್ಥಳೀಯ ಜನಪ್ರತಿನಿಧಿಗಳು, ಜಿ.ಪಂ ಮಾಜಿ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ್, ತಹಶೀಲ್ದಾರ್‌ ಜಿ.ಕೆ ಅಮರೇಶ್, ಗ್ರೇಡ್-2 ತಹಶೀಲ್ದಾರ್ ಎಂ. ಪ್ರತಿಭಾ, ಶಿರಸ್ತೇದಾರ್ ರೇಖಾ, ಉಪ ತಹಶೀಲ್ದಾರ್ ಅನ್ನದಾನೇಶ ಬಿ. ಪತ್ತಾರ್, ಸಿಬ್ಬಂದಿ ಹಾಗೂ ಸಾರ್ವಜನಿಕರಿದ್ದರು.

error: Content is protected !!