ರಾಣೇಬೆನ್ನೂರು ಕಮದೋಡ ಗ್ರಾಮದ ಬಳಿ ಇರುವ ರೇನ್ಬೋ ರೆಸಿಡೆನ್ಸಿಯಲ್ ಪಬ್ಲಿಕ್ ಸ್ಕೂಲ್ನ 18ನೇ ವಾರ್ಷಿಕೋತ್ಸವ ಇಂದು ನಡೆಯಲಿದೆ. ನಿವೃತ್ತ ಪ್ರಾಚಾರ್ಯ ಎನ್. ಕಟ್ಟಿಮನಿ ಅಧ್ಯಕ್ಷತೆ ವಹಿಸುವರು. ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿ ಮಂಜಾನಾಯ್ಕ, ಬಿಇಓ ಶಾಮಸುಂದರ ಅಡಿಗ, ಸಂಸ್ಥಾಪಕ ಸಿ.ಟಿ.ಸುರೇಶ, ಲಲಿತಾ ಸುರೇಶ, ಎಸ್.ಕೆ. ನಾಗರಾಜ ಭಾಗವಹಿಸುವರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ವಿದ್ಯಾರ್ಥಿಗಳ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ.
January 11, 2025