ಹರಿಹರ, ಜ.10- ನಗರದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಬೆಳಗಿನ ಜಾವದಲ್ಲಿ ಶ್ರೀ ಹರಿಹರೇಶ್ವರ ಸ್ವಾಮಿ ಮತ್ತು ಲಕ್ಷ್ಮೀ ದೇವಿಗೆ ವಿಶೇಷ ಅಭಿಷೇಕ, ಅಲಂಕಾರ, ನೈವೇದ್ಯ, ತುಳಸಿ ಅರ್ಚನೆ, ವಿಷ್ಣು ಸಹಸ್ರ ನಾಮ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ಸಂಜೆ ವಿವಿಧ ಮಹಿಳಾ ಮಂಡಳಿಯ ವರಿಂದ ಭಜನೆ ಮತ್ತು ಸಂಗೀತ ಸೇವೆ ಮುಂತಾದ ಪೂಜಾ ಕಾರ್ಯಕ್ರಮಗಳ ನಡೆದವು. ನೂರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ನಿನ್ನೆ ರಾತ್ರಿ `ನಮ್ಮ ಊರು, ನಮ್ಮ ಹೊಣೆ’ ತಂಡದವರಿಂದ ದೇವಸ್ಥಾನ ಸುತ್ತ ಸ್ವಚ್ಚತೆ ಮಾಡುವ ಮೂಲಕ ರಂಗೋಲಿ ಹಾಕಿ ದೇವಸ್ಥಾನವನ್ನು ಅಲಂಕಾರ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರಾದ ಶ್ರೀನಿವಾಸ ಮೂರ್ತಿ, ಗುರುಪ್ರಸಾದ್, ವಾರಿಜಾ ವೆಂಕಟೇಶ, ಶೇಷಾಚಲ, ಅಮರಾವತಿ ಮಹಾದೇವಪ್ಪ, ರಾಟಿ ರಮೇಶ್, ಕರಿಬಸಪ್ಪ ಕಂಚಿಕೇರಿ, ಅಂಜು ಸುರೇಶ್ ರಾಜೇನವರ್, ಅಶ್ವಿನಿ ಕೃಷ್ಣ, ಸಾಕಮ್ಮ ಸಾಕ್ಷಿ ಶಿಂಧೆ, ರಾಘವೇಂದ್ರ ತೇಲ್ಕರ್, ಗಂಗಾಧರ್ ದುರುಗೋಜಿ, ಟಿ.ಸಿ. ನಿರಂಜನ ಹಾಗೂ ಇತರರು ಇದ್ದರು.