ನಗರದಲ್ಲಿ ಇಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯಕಾರಿಣಿ ಸಭೆ, ಪದಗ್ರಹಣ

ದಾವಣಗೆರೆ, ಜ.10- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-29ನೇ ಸಾಲಿನ ಪ್ರಥಮ ರಾಜ್ಯ ಮಟ್ಟದ ಕಾರ್ಯಕಾರಿಣಿ ಸಭೆ, ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಬೀಳ್ಕೊಡುಗೆ ಸಮಾರಂಭವು ನಾಳೆ ದಿನಾಂಕ 11ರ ಶನಿವಾರ ನಡೆಯಲಿದೆ ಎಂದು ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಪಾಲಾಕ್ಷಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿರಮಗೊಂಡನಹಳ್ಳಿ ಬಳಿಯ ಸುಧಾ ವೀರೇಂದ್ರ ಪಾಟೀಲ್ ಸಮುದಾಯ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕಾರಿಣಿ ಸಭೆಯು ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ರಾಜ್ಯದ 28 ಜಿಲ್ಲೆ ಹಾಗೂ 3 ಶೈಕ್ಷಣಿಕ ಜಿಲ್ಲೆಗಳಿಂದ ಜಿಲ್ಲಾಧ್ಯಕ್ಷರು, ಸಂಘದ ರಾಜ್ಯ ಪರಿಷತ್ ಸದಸ್ಯರು, ತಾಲ್ಲೂಕು ಅಧ್ಯಕ್ಷರುಗಳು ಸೇರಿದಂತೆ 1500ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಲಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಗೆ ಹದಡಿ ರಸ್ತೆ ಅಂಡರ್‌ ಪಾಸ್‌ನಿಂದ ಸಮುದಾಯ ಭವನದ ವರೆಗೆ ಸರ್ಕಾರಿ ನೌಕರರಿಂದ ಬೈಕ್ ರಾಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ನಂತರ ಮಧ್ಯಾಹ್ನ 3 ಗಂಟೆಗೆ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜಿಲ್ಲಾಧ್ಯಕ್ಷ ವೀರೇಶ್‌ ಎಸ್.ಒಡೇನಪುರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಖಜಾಂಚಿ ತಿಪ್ಪೇಸ್ವಾಮಿ ಬಿ.ಆರ್., ಕಾರ್ಯಾಧ್ಯಕ್ಷ ಸಿ.ಪರಶುರಾಮಪ್ಪ,  ರಾಜ್ಯ ಪರಿಷತ್ ಸದಸ್ಯ ಜಿ.ಓಬಳಪ್ಪ, ಮಂಜುನಾಥ ಹಿತ್ತಲಮನಿ, ಅಂಜಿನಪ್ಪ ಇದ್ದರು.

error: Content is protected !!