ಭಾರತೀಯ ಗ್ರಾಮೀಣ ಮಹಿಳಾ ಸಂಘ, ವನಿತಾ ಸಮಾಜದ ವತಿಯಿಂದ ನೂತನ ವರ್ಷಕ್ಕೆ ಸಂಗೀತ ಸಂಜೆ ಮಧುರ ಗೀತೆಗಳ ಸಂಗಮ ಮತ್ತು ಕ್ಯಾಂಪ್ ಫೈಯರ್ ಕಾರ್ಯಕ್ರಮವು ಇಂದು ಸಂಜೆ 6 ಗಂಟೆಗೆ ವನಿತಾ ಸಮಾಜದ ಸತ್ಯ ಸಾಯಿ ರಂಗಮಂದಿರದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಎಸ್ಪಿ ಶ್ರೀಮತಿ ಉಮಾ ಪ್ರಶಾಂತ್, ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ವನಿತಾ ಸಮಾಜದ ಅಧ್ಯಕ್ಷರಾದ ಪದ್ಮ ಪ್ರಕಾಶ್ ಉಪಸ್ಥಿತರಿರುವರು. ಭಾರತೀಯ ಗ್ರಾಮೀಣ ಮಹಿಳಾ ಸಂಘದ ಶ್ರೀಮತಿ ಗುಂಡಿ ಪುಷ್ಪ ಸಿದ್ದೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ನಗರದ ಗಾನಕೋಗಿಲೆಗಳಾದ ಶ್ರೀಮತಿ ನೇತ್ರಾ, ಕು. ಕೃತಿಕಾ ರಾಣಿ, ಚಿರಂತ್ ಅವರು ಸುಮಧುರ ಗೀತೆಗಳ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಗೀತಾ ಬದ್ರಿನಾಥ್ ತಿಳಿಸಿದ್ದಾರೆ.