ದಾವಣಗೆರೆ, ಜ. 10- ತುಮಕೂರಿನ ಎಂಪ್ರೆಸ್ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಸ ಪ್ರಶ್ನೆ ವಿಭಾಗದಲ್ಲಿ ನಗರದ ಸಿದ್ಧಗಂಗಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಅಜಯ್ ಕುಮಾರ್ ಆರ್. ಮತ್ತು ರವಿಕುಮಾರ್ ಎನ್. ಪ್ರಥಮ ಸ್ಧಾನಗಳಿಸಿ ಕಾಲೇಜಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಈ ಬಾಲಕರು ಪ್ರಶಸ್ತಿ ಪತ್ರದ ಜೊತೆಗೆ ತಲಾ 12 ಸಾವಿರ ನಗದು ಬಹುಮಾನ ಪಡೆದಿದ್ದಾರೆ. ಬಾಲಕರ ಅಪ್ರತಿಮ ಸಾಧನೆಯನ್ನು ಕಾಲೇಜಿನ ಪ್ರಾಚಾರ್ಯರಾದ ವಾಣಿಶ್ರೀ, ಸಂಸ್ಥೆಯ ವ್ಯವಸ್ಥಾಪಕ ಡಾ|| ಜಯಂತ್ ಹೇಮಂತ್, ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿಸೌಜಾ ಅಭಿನಂದಿಸಿದ್ದಾರೆ.