ದಾವಣಗೆರೆ, ಜ. 8- ತಾಲ್ಲೂಕಿನ ಲೋಕಿಕೆರೆ ರಸ್ತೆಯಲ್ಲಿ ರುವ ಯರವನಾಗ್ತಿಹಳ್ಳಿ ಕ್ಯಾಂಪ್ ನಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 10ರ ಶುಕ್ರವಾರ ವೈಕುಂಠ ಏಕಾದಶಿ ನಡೆಯಲಿದೆ. ಅಂದು ಮುಂಜಾನೆ 3 ರಿಂದ ವಿಶೇಷ ಪಂಚಾಮೃತ ಅಭಿ ಷೇಕ, ಪುಷ್ಪಾಲಂಕಾರ, ವಿಶೇಷ ಪೂಜೆ ಕಾರ್ಯಕ್ರಮಗಳನ್ನು ಏರ್ಪಡಿಸ ಲಾ ಗಿದೆ. ನಂತರ ಬೆಳಿಗ್ಗೆ 7 ರಿಂದ ಉತ್ತರ ವೈಕುಂಠ ದ್ವಾರದಿಂದ ಸ್ವಾಮಿಯ ದರ್ಶನ ನಡೆಯಲಿದೆ.
January 10, 2025