ಹರಿಹರ, ಜ.7- ಹಜರತ್ ಆಹ್ಮದ್ ಷಾ ಮತ್ತು ಮೊಹಮದ್ ಷಾ ವಲಿ ರವರ ಗಂಧ ಕಾರ್ಯಕ್ರಮದ ಅಂಗವಾಗಿ ಸಂದಲ್ ಮತ್ತು ಉರುಸ್ ಕಾರ್ಯಕ್ರಮವನ್ನು ನಾಳೆ ದಿನಾಂಕ 8 ರಿಂದ 10 ರವರೆಗೆ ಆಚರಿಸಲಾಗುತ್ತದೆ ಎಂದು ಹೆಚ್.ಎ.ಎಂ.ನೌಜವಾನ್ ಕಮಿಟಿ ಅಧ್ಯಕ್ಷ ನಸ್ರುಲ್ಲಾ ಮಕಂದಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗಂಧ ಕಾರ್ಯಕ್ರಮವು ನಾಳೆ ದಿನಾಂಕ 8ರಂದು ಮಧ್ಯಾಹ್ನ 4 ಗಂಟೆಯಿಂದ ಪ್ರಾರಂಭವಾಗಲಿದ್ದು, ಮೆರವಣಿಗೆ ಬಾಹರ್ ಮಕಾನ್ ದರ್ಗಾದಿಂದ ಆರಂಭಗೊಂಡು ಆಂಜನೇಯ ಸ್ವಾಮಿ ದೇವಸ್ಥಾನ ರಸ್ತೆ, ಹಳೇ ಪಿ.ಬಿ. ರಸ್ತೆ, ರಾಣಿ ಚೆನ್ನಮ್ಮ ರಸ್ತೆಯ ಮೂಲಕ ಹಾದು ದರ್ಗಾಕ್ಕೆ ತಂದು ಸಮರ್ಪಿಸಲಾಗುತ್ತದೆ. 9 ರಂದು ರಾತ್ರಿ 9 ಗಂಟೆಗೆ ದಾವಣಗೆರೆ ಮೌಲಾನಾ ಮುಫ್ತಿ ರಿಜ್ವಾನ್ ನೂರಿ ಅವರಿಂದ ಪ್ರವಚನ (ತಕರೀರ್) ಕಾರ್ಯಕ್ರಮ ನಡೆಯಲಿದೆ. 10 ರಂದು ಬಾಹರ್ ಮಕಾನ್ ದರ್ಗಾ ಮುಂಭಾಗದಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ.
ಈ ಬಾರಿ ಯಾವುದೇ ರೀತಿಯ ಡಿ.ಜೆ. ಸೌಂಡ್ ಸಿಸ್ಟಮ್ ಬಳಸದೆ ಮೆರವಣಿಗೆ ಮಾಡಲಾಗುತ್ತದೆ ಎಂದು ಅವರು ಹೇಳಿದರು. ಗೋಷ್ಠಿಯಲ್ಲಿ ಬಾಬುಜಾನ್, ಅಫ್ತಾಭ್, ಅಜಗರ್ ಅಲಿ, ಶಂಶಾಖಾನ್ ಇತರರು ಹಾಜರಿದ್ದರು.