ದಾವಣಗೆರೆ, ಜ. 7 – ಆವರಗೆರೆ ರಿಲಯನ್ಸ್ ಪೆಟ್ರೋಲ್ ಬಂಕ್ ಹಿಂಭಾಗ ದಲ್ಲಿರುವ ಆರ್.ಜಿ.ಎಸ್. ನಗರದಲ್ಲಿರುವ ಶ್ರೀನಿವಾಸ ಮಂದಿರದಲ್ಲಿ ಇದೇ ದಿನಾಂಕ 10ರಂದು ವೈಕುಂಠ ಏಕಾದಶಿ ನಡೆಯಲಿದೆ. ಅಂದು ಬೆಳಿಗ್ಗೆಯಿಂದ ವಿಶೇಷ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ವಿಶೇಷ ಪೂಜೆ ಕಾರ್ಯಕ್ರಮ ಗಳನ್ನು ಏರ್ಪಡಿ ಸಲಾಗಿದೆ. ನಂತರ ಉತ್ತರ ವೈಕುಂಠ ದ್ವಾರದಿಂದ ಸ್ವಾಮಿ ಯ ದರ್ಶನ, ಪ್ರಸಾದ ನಡೆಯಲಿದೆ ಎಂದು ಶ್ರೀ ಕನ್ನಿಕಾಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಆರ್.ಜಿ .ಶ್ರೀನಿವಾಸ ಮೂರ್ತಿ ತಿಳಿಸಿದ್ದಾರೆ.
January 9, 2025