ದಾವಣಗೆರೆ, ಜ. 7 – ಸೀನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್ ಶಿಪ್ ಪಂದ್ಯಾವಳಿಯು ದೊಡ್ಡಬಳ್ಳಾಪುರದಲ್ಲಿ ಇಂದಿನಿಂದ ಮೂರು ದಿನ ನಡೆಯಲಿದ್ದು, ದಾವಣಗೆರೆ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯಿಂದ ಆಯ್ಕೆ ಆದ ಕ್ರೀಡಾ ಪಟುಗಳಿಗೆ ಕಬಡ್ಡಿ ಒಳಾಂಗಣ ಕ್ರೀಡಾಂಗಣದಲ್ಲಿ ಸಮವಸ್ತ್ರ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಆಯ್ಕೆಯಾದ ಕ್ರೀಡಾಪಟುಗಳಿಗೆ ಸ್ಥಳೀಯಯವರಾದ ಕಿರುತೆರೆ ನಟ ಗಿರೀಶ್ ಜತ್ತಿ, ಡಾ. ಮಲ್ಲಿನಾಥ್ ಅವರುಗಳು ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆಯ ಅಧ್ಯಕ್ಷ ಎಂ. ನಾಗರಾಜ್, ಸಂಘಟನಾ ಕಾರ್ಯದರ್ಶಿ ಶಂಕರ್ ಗಣೇಶ್, ಎಮ್. ಪಳನಿ ಸ್ವಾಮಿ, ವಾರ್ತಾ ಇಲಾಖೆಯ ನಿವೃತ್ತ ಉದ್ಯೋಗಿ ಬಿ.ಎಸ್. ಬಸವರಾಜ್, ತರಬೇತುದಾರ ದುರ್ಗಾಂಬಿಕ ಕ್ರೀಡಾ ಸಮಿತಿಯ ಎಚ್. ನಾಗರಾಜ್ ಉಪಸ್ಥಿತರಿದ್ದರು.