ಲಯನ್ಸ್ ಪ್ರಾಂತೀಯ ಅಧ್ಯಕ್ಷ ವೈ.ಬಿ. ಸತೀಶ್ ಅವರು ದಾವಣಗೆರೆ ಲಯನ್ಸ್ ಕ್ಲಬ್ಗೆ ಇಂದು ಅಧಿಕೃತ ಭೇಟಿ ನೀಡಲಿದ್ದು, ಈ ಸಂಬಂಧ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10 ಗಂಟೆಗೆ ನಂದಗೋಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾಸನ್ ಐ ಕೇರ್ ಆಸ್ಪತ್ರೆ ಸಹಯೋಗದೊಂದಿಗೆ ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ, ನೋಟ್ ಪುಸ್ತಕ, ಲೇಖನಿ ಸಾಮಾಗ್ರಿಗಳನ್ನು ವಿತರಿಸಲಾಗುತ್ತದೆ ಎಂದು ಲಯನ್ಸ್ ಕಾರ್ಯದರ್ಶಿಯೂ ಆಗಿರುವ ಶಿಕ್ಷಕ ಸಿ. ಅಜಯ್ ನಾರಾಯಣ್ ತಿಳಿಸಿದ್ದಾರೆ.
ನಂತರ ಸಂಜೆ 7.35ಕ್ಕೆ ಲಯನ್ಸ್ ಭವನದಲ್ಲಿ ಏರ್ಪಾಡಾಗಿರುವ ಸಭಾ ಕಾರ್ಯಕ್ರಮದಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ವೈ.ಬಿ.ಸತೀಶ್ ಅವರನ್ನು ಬರ ಮಾಡಿಕೊಂಡು ಗೌರವಿಸಲಾಗುತ್ತದೆ. ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಜಿ. ಉಳುವಯ್ಯ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಲಯನ್ಸ್ ಮಾಜಿ ರಾಜ್ಯಪಾಲ ಡಾ. ಬಿ.ಎಸ್.ನಾಗಪ್ರಕಾಶ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಲಯನ್ಸ್ ಸದಸ್ಯರು ಈ ಎಲ್ಲಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಲಯನ್ಸ್ ಸಹ ಕಾರ್ಯದರ್ಶಿ ಹೆಚ್.ಎಂ. ನಾಗರಾಜ್, ಖಜಾಂಚಿ ಎಸ್. ನಾಗರಾಜ್ ಕೋರಿದ್ದಾರೆ.