ದಾವಣ ಗೆರೆ, ಜ.7- ನಿನ್ನೆ ದೈವಾಧೀನ ರಾದ ನಾಡಿನ ಖ್ಯಾತ ಸಾಹಿತಿ ನಾ. ಡಿಸೋಜ ಅವರು ಈಗ್ಗೆ ಸುಮಾರು 35 ವರ್ಷಗಳ ಹಿಂದೆ ನಗರದ ಹಿರಿಯ ಪತ್ರಿಕಾ ಛಾಯಾಗ್ರಾಹಕ ಹೆಚ್.ಬಿ. ಮಂಜುನಾಥರ ಫೈನ್ ಆರ್ಟ್ ಫೋಟೋ ಸ್ಟುಡಿಯೋಗೆ ಬಂದು ತೆಗೆಸಿಕೊಂಡ ಅವರು ತುಂಬಾ ಮೆಚ್ಚಿಕೊಂಡ ಫೋಟೋ ಇದು.
ಅಂದೇ ಸ್ಟುಡಿಯೋದಲ್ಲಿ ನಾ ಡಿಸೋಜರ ಪತ್ರಿಕಾ ಸಂದರ್ಶನವನ್ನು ನಾಡಿನ ಹಿರಿಯ ಪತ್ರಿಕಾ ಅಂಕಣಕಾರ ಹೆಚ್. ಆನಂದರಾಮ ಶಾಸ್ತ್ರಿಯ ವರು ಮಾಡುವಾಗ ಚಿಂತಕರು, ಬರಹಗಾರರು, ಆಯುರ್ವೇದ ತಜ್ಞರು ಆದ ನಾಗಾನಂದ (ಡಾ.ವಿಶ್ವನಾಥರಾವ್) ಹಾಗೂ ಶಿಕ್ಷಕ ಪರಸಪ್ಪ ಅಲ್ಲಿದ್ದರು.