ದಾವಣಗೆರೆ, ಜ. 7 – ನಗರದ ವಸಂತ ರಸ್ತೆ ಹಾಲೇಶ್ವರ ಪ್ರಿಂಟಿಂಗ್ ಪ್ರೆಸ್ ಹಿಂಭಾಗದಲ್ಲಿರುವ ಶ್ರೀ ಉತ್ಸವಾಂಭದೇವಿ, ಶ್ರೀ ಚೌಡೇಶ್ವರಿದೇವಿ, ಶ್ರೀ ಗಣೇಶ, ಶ್ರೀ ಆದಿಶಕ್ತಿ, ಶ್ರೀ ಮಹಾಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಇದೇ ದಿನಾಂಕ 11ರ ಶನಿವಾರದಿಂದ 13ರ ಸೋಮವಾರದವರೆಗೆ ಶ್ರೀ ದೇವಿಯವರ ಜಾತ್ರಾ ಮಹೋತ್ಸವ ನಡೆಯಲಿದೆ. 13ರಂದು ಬೆಳಗಿನ ಜಾವ 4-30ಕ್ಕೆ ತಾಯಿಯವರಿಗೆ ರುದ್ರಾಭಿಷೇಕ, ಸಹಸ್ರ, ಬಿಲ್ವಾರ್ಚನೆ, ಪುಷ್ಪ ಅಲಂಕಾರ ಪೂಜೆ ಹಾಗೂ 9-30 ರಿಂದ ಸರ್ವ ಭಕ್ತಾಧಿಗಳಿಗೂ ಉಡಿ ಅಕ್ಕಿ ಸೇವೆ ಮತ್ತು 12-30ಕ್ಕೆ ಪ್ರಸಾದ ವಿನಿಯೋಗ ಕಾರ್ಯಕ್ರಮವಿರುತ್ತದೆ ಮತ್ತು ಸಂಜೆ 5-30ಕ್ಕೆ ಮಾತ್ರೋತ್ರಿಯವರ ಮೆರವಣಿಗೆ ಇರುತ್ತದೆ. ಮೆರವಣಿಗೆ ವೇಳೆಯಲ್ಲಿ ಕನ್ಯೆಯರು, ಮುತ್ತೈದೆಯರು, ಕಳಸದೊಂದಿಗೆ ತಾಯಿಯವರನ್ನು ಸ್ವಾಗತಿಸಬೇಕಾಗಿ ಶ್ರೀ ಉತ್ಸವಾಂಭ ದೇವಸ್ಥಾನದ ಭಕ್ತ ಮಂಡಲಿ ವಿನಂತಿಸಿದೆ.
January 9, 2025