ಮಲೇಬೆನ್ನೂರು, ಜ.7- ನಂದಿತಾವರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ 11 ಜನ ಆಯ್ಕೆಯಾಗಿದ್ದಾರೆ.
ಸಾಲಗಾರರ ಕ್ಷೇತ್ರದಿಂದ ಸಾಮಾನ್ಯ ವರ್ಗದ ನಂದಿತಾವರೆಯ ಪಿ.ಗದಿಗೆಪ್ಪ, ಎನ್.ಪಿ.ಶಿವನಗೌಡ, ಎನ್.ಎಂ.ರಾಜು, ಎಂ.ವೆಂಕಟೇಶ್, ಎಕ್ಕೆಗೊಂದಿಯ ಬಿ.ಜಿ.ತಿಮ್ಮನಗೌಡ, ಎಸ್ಸಿ ವರ್ಗದ ನಂದಿತಾವರೆಯ ಎ.ಕೆ.ನಾಗಪ್ಪ, ಬಿಸಿಎಂ `ಎ’ ವರ್ಗದ ಎಕ್ಕೆಗೊಂದಿ ಜಿ.ಎಸ್.ಮಹಾಂತೇಶ್, ಬಿಸಿಎಂ `ಬಿ’ ವರ್ಗದ ನಂದಿತಾವರೆಯ ಎನ್.ಎಂ.ಶಂಭಯ್ಯ, ಮಹಿಳಾ ಮೀಸಲು ವರ್ಗದಿಂದ ಎಕ್ಕೆಗೊಂದಿ ನಾಗರತ್ನಮ್ಮ, ನಂದಿತಾವರೆ ಕೆ.ಜಿ.ಕಮಲಮ್ಮ ಮತ್ತು ಸಾಲಗಾರರಲ್ಲದ ಕ್ಷೇತ್ರದಿಂದ ನಂದಿತಾವರೆಯ ಕೆ.ಎನ್.ಹನುಮಗೌಡ ಅವರುಗಳು ಚುನಾಯಿತರಾಗಿದ್ದಾರೆ.
ಎಸ್ಟಿ ಮೀಸಲು ಸ್ಥಾನಕ್ಕೆ ಯಾರೂ ಅರ್ಜಿ ಸಲ್ಲಿಸದ ಕಾರಣ ಆ ಸ್ಥಾನ ಖಾಲಿ ಉಳಿದಿದೆ.