ದಾವಣಗೆರೆ, ಜ. 7- ಶಿವಮೊಗ್ಗ ಡಿಸ್ಟಿಕ್ ಸ್ಫೋರ್ಟ್ಸ್ ಕರಾಟೆ ಅಸೋಸಿಯೇಷನ್ ಆಯೋಜಿಸಿದ್ದ 2 ನೇ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಸ್ಪರ್ಧೆಗಳಲ್ಲಿ ನಗರದ ಡ್ರಾಗನ್ ವಾರಿಯರ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ ತಂಡದ ಮಕ್ಕಳು ಭಾಗವಹಿಸಿ ಪ್ರಶಸ್ತಿ ಪಡೆದಿರುತ್ತಾರೆ. ಇವರಿಗೆ ಸಂಸ್ಥೆಯ ಕಾರ್ಯದರ್ಶಿ ಸಾದಿಕ್ ಬಾಷಾ ತರಬೇತಿ ನೀಡಿದ್ದಾರೆ.
ಯುಕ್ತ ಎಂ. ಮಾಗನೂರ್ ಕಟೆ ಮೊದಲ ಸ್ಥಾನ ಹಾಗೂ ಕುಮುಟೆ ಮೊದಲ ಸ್ಥಾನ ಗಳಿಸಿದ್ದಾರೆ. ಇದೇ ರೀತಿ ಆಯಾ ವಯೋಮಿತಿ ವಿಭಾಗದಲ್ಲಿ, ನಿಹಾರಿಕಾ ಎಂ. ಮಾಗನೂರ್ ಮೊದಲ ಸ್ಥಾನ, ಋಷಿ ಎರಡನೆಯ ಸ್ಥಾನ, ಅದ್ವಿತ್ ಕಾಮತ್ ಎರಡನೆ ಸ್ಥಾನ, ಸಂವಿದ್ ಮೂರನೇ ಸ್ಥಾನ, ವಿಸ್ಮಯ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಬಹುಮಾನ ಪಡೆದ ಪಟುಗಳಿಗೆ ವಿದ್ಯಾನಗರ ವಾಯು ವಿಹಾರ ಬಳಗವು ಇಂದು ಬೆಳಿಗ್ಗೆ ಹಿರಿಯ ಪತ್ರಕರ್ತ ಹಾಗೂ ಲೇಖಕ ಬಾ.ಮ. ಬಸವರಾಜಯ್ಯ ಅವರ ಸಮ್ಮುಖದಲ್ಲಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ. ದಿಳ್ಯಪ್ಪ ಮತ್ತು ಪೋಷಕರು ಉಪಸ್ಥಿತರಿದ್ದರು.