ದಾವಣಗೆರೆ, ಜ.7- 2025ನೇ ವರ್ಷದಲ್ಲಿ ದಾವಣಗೆರೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ಶಿಬಿರಗಳನ್ನು ಆಯೋಜಿಸಲಾಗಿದೆ.
ಪ್ರತಿ ತಿಂಗಳು 5 ನೇ ತಾರೀಖಿನಂದು ಮಲೇಬೆನ್ನೂರಿನ ನೀರಾವರಿ ಇಲಾಖೆಯ ಸಬ್ ಡಿವಿಜನ್ ಕಚೇರಿ ಆವರಣ ಮತ್ತು ಹರಿಹರದ ಎ.ಪಿ.ಎಂ.ಸಿ ಆವರಣ. ಪ್ರತಿ ತಿಂಗಳು 10ನೇ ತಾರೀಖಿನಂದು ಚನ್ನಗಿರಿ ಎ.ಪಿ.ಎಂ.ಸಿ ಆವರಣ, ಪ್ರತಿ ತಿಂಗಳು 20ನೇ ತಾರೀಖಿನಂದು ಜಗಳೂರು ಎ.ಪಿ.ಎಂ.ಸಿ ಆವರಣ. ಪ್ರತಿ ತಿಂಗಳು 23ನೇ ತಾರೀಖಿನಂದು ನ್ಯಾಮತಿ ಮತ್ತು ಹೊನ್ನಾಳಿ ಎ.ಪಿ.ಎಂ.ಸಿ ಆವರಣದಲ್ಲಿ ಸಾರಿಗೆ ಶಿಬಿರಗಳನ್ನು ನಡೆಸಲಾಗುವುದು ಎಂದು ಸಾರಿಗೆ ಅಧಿಕಾರಿ ಸಿ.ಎಸ್. ಪ್ರಮುತೇಶ್ ತಿಳಿಸಿದ್ದಾರೆ.