ಪ್ರೊ ಸಿ.ವಿ. ಪಾಟೀಲ್ ರಚಿತ `ಹರಿಹರ ತಾಲ್ಲೂಕು ಗೆಜೆಟಿಯರ್’ ಪರಿಚಯ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ. ಹರೀಶ್
ಹರಿಹರ, ಜ.7- ಮುಂದಿನ ಪೀಳಿಗೆಗೆ ಸಾಹಿತ್ಯದ ಮೂಲಕ ಸಾಂಸ್ಕೃತಿಕ ಪರಂಪರೆಗಳನ್ನು ಪರಿಚಯಿಸುವಂತಹ ಕೆಲಸವು ಹಿರಿಯ ಸಾಹಿತಿ ಗಳಿಂದ ಆಗುವಂತಾಗಲಿ ಎಂದು ಶಾಸಕ ಬಿ.ಪಿ ಹರೀಶ್ ಆಶಿಸಿದರು.
ನಗರದ ತಾಪಂ ಕಚೇರಿಯ ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ಸರ್ಕಾರ ಗೆಜೆಟಿಯರ ಇಲಾಖೆ ವತಿಯಿಂದ ಪ್ರೊ ಸಿ.ವಿ. ಪಾಟೀಲ್ ರಚಿಸಿರುವ ಹರಿಹರ ತಾಲ್ಲೂಕು ಗೆಜೆಟಿಯರ್ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತ ನಾಡಿದರು.
ಹರಿಹರ ನಗರ ಮತ್ತು ಗ್ರಾಮೀಣ ಪ್ರದೇಶ ಗಳಲ್ಲಿ ಸಾಕಷ್ಟು ಸಾಹಿತಿಗಳಿದ್ದು, ಅವರಲ್ಲಿ ಇರುವಂತ ಅನೇಕ ವಿಚಾರಗಳನ್ನು ತಿಳಿಸುವಂತಹ ಕೆಲಸವಾದರೆ ಯುವ ಪೀಳಿಗೆಗೆ ಸಾಹಿತ್ಯದ ಬಗ್ಗೆ ಹೆಚ್ಚು ಆಸಕ್ತಿ ಮೂಡುತ್ತದೆ. ಇದರಿಂದಾಗಿ ಸಮಾಜಕ್ಕೆ ಸಾಕಷ್ಟು ಅನುಕೂಲ ಕೂಡಾ ಆಗುತ್ತದೆ ಎಂದು ಹೇಳಿದರು.
ತಹಶೀಲ್ದಾರ್ ಗುರುಬಸವರಾಜ್ ಮಾತ ನಾಡಿ, ನಮ್ಮ ಲ್ಲಿನ ಅಂಕಿ ಅಂಶಗಳು ಸಾಮಾಜಿಕ ವ್ಯವಸ್ಥೆಯಲ್ಲಿ ಸಿದ್ದತೆ ಆಗ ಬೇಕಾದರೆ, ದತ್ತಾಂಶ ಬಹಳಷ್ಟು ಪ್ರಾಮುಖ್ಯತೆ ಹೊಂದಿದೆ. ದತ್ತಾಂಶ ಸಂಗ್ರಹಿಸುವುದು ಸುಲಭವಾದುದ್ದಲ್ಲ, ಆದರೆ ಹಿರಿಯ ಸಾಹಿತಿ ಸಿ.ವಿ. ಪಾಟೀಲ್‌ರವರು ಗೆಜೆಟಿಯರ್ ಪುಸ್ತಕದಲ್ಲಿ ಬಹಳ ಅದ್ಬುತ ಅಂಶಗಳು ಹಾಗೂ ಮಾಹಿತಿ ಸಂಗ್ರಹಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಇಂದಿನ ಕಾಲದಲ್ಲಿ ಕವನ ಕಾವ್ಯ ಮತ್ತು ವಿಮರ್ಶಕ ಗ್ರಂಥಗಳನ್ನು ಬರೆಯುವುದು ಸುಲಭ. ಆದರೆ ಇತಿಹಾಸ ಪುಟಗಳಲ್ಲಿ ಸೇರಿರುವಂತಹ ಅಂಶಗಳನ್ನು ಸಂಗ್ರಹಿಸುವುದು ಕಷ್ಟಕರವಾಗಿದೆ. ಕಾರಣ ಗೆಜೆಟಿಯರ್ ಪ್ರಕಟಿಸಲು ತನ್ನದೇ ಆದ ಮಾನದಂಡಗಳು ಇರುತ್ತದೆ ಅವುಗಳನ್ನು ಒಳಗೊಂಡಂತೆ ಗೆಜೆಟಿಯರ್ ಪರಿಚಯ ಪ್ರಕಟಿಸಿ ರುವುದು ತಾಲೂಕಿನ ಜನತೆ ಹೆಮ್ಮೆ ಪಡುವಂತಹ ವಿಚಾರವಾಗಿದೆ ಎಂದು ಹೇಳಿದರು.
ಈ ವೇಳೆ ಹರಿಹರ ತಾಲ್ಲೂಕು ಗೆಜೆಟಿಯರ್ ಕೃತಿ ಕುರಿತು ನಿವೃತ್ತ ಪ್ರಾಚಾರ್ಯರಾದ ಪ್ರೊ. ಹೆಚ್ ಲಿಂಗಪ್ಪ, ಪ್ರೊ. ಬಾತಿ ಬಸವರಾಜ್, ಪ್ರೊ. ಹೆಚ್.ಎ. ಭಿಕ್ಷಾವರ್ತಿಮಠ್, ನಗರಸಭೆ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷ ಗುತ್ತೂರು ಜಂಬಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ. ರವಿಚಂದ್ರ ಇತರರು ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್.ಹೆಚ್. ಹೂಗಾರ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಟಿ.ಜೆ ಮುರುಗೇಶಪ್ಪ, ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ, ದೂಡ ಮಾಜಿ ಸದಸ್ಯ ಹೆಚ್. ನಿಜಗುಣ, ಡಿ.ಎಂ. ಮಂಜುನಾಥಯ್ಯ, ಬಿ.ಬಿ ರೇವಣ್ಣನಾಯ್ಕ್, ಎ. ರಿಯಾಜ್ ಆಹ್ಮದ್, ವಿ.ಬಿ ಕೊಟ್ರೇಶಪ್ಪ, ಶೇಖರಗೌಡ ಪಾಟೀಲ್, ಹೆಚ್.ಸಿ. ಕೀರ್ತಿ ಕುಮಾರ್, ಹೆಚ್.ಬಿ. ರುದ್ರಗೌಡ್ರ ಯಕ್ಕೆಗೊಂದಿ ಇತರರು ಹಾಜರಿದ್ದರು.