ಮಲೇಬೆನ್ನೂರು, ಜ.2- ಹೊಳೆಸಿರಿಗೆರೆ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಬಂಡೇರ ಪ್ರಭು ಅವರು ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿ.ಪಂ ಎಇಇ ಗಿರೀಶ್ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಗ್ರಾಮದ ಮುಖಂಡರಾದ ಎನ್.ಜಿ.ನಾಗನಗೌಡ್ರು, ಬಿ.ಹಾಲೇಶಪ್ಪ, ಎ.ಕೊಟ್ರಪ್ಪ ಸೇರಿದಂತೆ ಗ್ರಾ.ಪಂ ಸದಸ್ಯರು ಮತ್ತು ಪಿಡಿಒ ಜಯಕುಮಾರ್ ಹಾಗೂ ಗ್ರಾಮಸ್ಥರು ಈ ವೇಳೆ ಹಾಜರಿದ್ದು, ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.
January 7, 2025