ದಾವಣಗೆರೆ, ಜ. 2- ಸೇವ್ ಅರ್ಥ್ – ಫೋಟೋಗ್ರಫಿ ಗುಂಪಿನಿಂದ ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಎಸ್. ಶಿಶುಪಾಲ ಅವರನ್ನು 2024ರ ವರ್ಷದ 10 ಅತ್ಯುತ್ತಮ ಛಾಯಾಗ್ರಾಹಕರಲ್ಲಿ ಒಬ್ಬರೆಂದು ಪರಿಗಣಿಸಿ ಪ್ರಶಸ್ತಿ ಪತ್ರ ನೀಡಲಾಗಿದೆ. ಇವರ ಉತ್ತಮ ಪಕ್ಷಿ ಚಿತ್ರಗಳನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗಿದೆ. ದಾವಣಗೆರೆ ಸುತ್ತಮುತ್ತ ಇರುವ ಪಕ್ಷಿಗಳನ್ನು ಶಿಶುಪಾಲ ಅವರು ತಮ್ಮ ಕ್ಯಾಮೆರಾದಲ್ಲಿ ದಾಖಲಿಸಿದ್ದಾರೆ.
January 7, 2025