ಬೆಂಗಳೂರು, ಜ. 2 – ಕರ್ನಾಟಕ ಮಾಧ್ಯಮ ಅಕಾಡೆಮಿಯು ತನ್ನ ವಾರ್ಷಿಕ ಪ್ರಶಸ್ತಿಗಳನ್ನು ಇಂದು ಸಂಜೆ ಘೋಷಿಸಿದ್ದು, ದಾವಣಗೆರೆ ಜಿಲ್ಲೆಯ ಐವರು ಪತ್ರಕರ್ತರು ಆಯ್ಕೆಯಾಗಿದ್ದಾರೆ. ಪ್ರಜಾವಾಣಿ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ, ದೂರದರ್ಶನದ ಎ.ಎಲ್.ತಾರಾನಾಥ, ವಿಜಯವಾಣಿ ಹಿರಿಯ ವರದಿಗಾರ ರಮೇಶ ಜಹಗೀರದಾರ್, ಸುಭಾಷಿತ ಪತ್ರಿಕೆ ಸಂಪಾದಕ ಕೆ.ಜೈಮುನಿ ಹಾಗೂ ಹರಿಹರದ ಲೋಕಪ್ರಭ ಪತ್ರಿಕೆ ಸಂಪಾದಕರಾದ ಡಿ.ಎನ್.ಶಾಂಭವಿ ನಾಗರಾಜ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕರ್ನಾ ಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯಿಷಾ ಖಾನಂ ಅವರು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದರು.
January 7, 2025