ದಾವಣಗೆರೆ, ಡಿ. 29 – ನಗರದ ಅಕ್ಕಮಹಾದೇವಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಈಚಗೆ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭ ಯಶಸ್ವಿಯಾಗಿ ನಡೆಯಿತು.
ಜಯಣ್ಣ ಬಿ. ಮೂಲಿಮನಿ ಅವರು, ಜನಪದ ಸೊಗಡಿನೊಂ ದಿಗೆ ವಿದ್ಯಾರ್ಥಿಗಳಿಗೆ ಸೊಗಸಾದ ಲಾವಣಿ ಹಾಡು, ಚುಟುಕುಗಳೊಂದಿಗೆ ಕನ್ನಡ ಭಾಷೆಯ ಸವಿಯೂಟ ವನ್ನು ಉಣಬಡಿಸಿ, ಮಂಡ್ಯದ ಕನ್ನಡ ಸಾಹಿತ್ಯ ಸಮ್ಮೇಳನದ ಮೆರಗು ತರಿಸಿದರಲ್ಲದೇ, ಜ್ಯೂನಿಯರ್ ಯುಗ ಧರ್ಮ ರಾಮಣ್ಣ ಎಂಬ ಭಾವನೆ ಮೂಡಿಸಿದರು.
ಕನ್ನಡ ಪರಂಪರೆಯ ಜ್ಞಾನಪೀಠ ಸಾಹಿತಿಗಳ ಬಗ್ಗೆ, ಮಹಾಭಾರತದ ಮುಖ್ಯ ಪಾತ್ರಗಳ ಸನ್ನಿವೇಶ ಹಾಗೂ ಕನ್ನಡ ಶಾಸ್ತ್ರೀಯ ಸ್ಥಾನಮಾನದ ಬಗ್ಗೆ ನಮ್ಮ ಜನಪದ ಕವಿಗಳು ಯಾವುದೇ ಶೇಕ್ಸ್ಪಿಯರ್ಗಿಂತ ಕಡಿಮೆ ಇಲ್ಲ. ಇಂದಿನ ಮಮ್ಮಿ-ಡ್ಯಾಡಿ ಸಂಸ್ಕೃತಿ ಸರಿಯಲ್ಲ ಎಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯ ಸುರೇಶ್ನಾಯ್ಕ ಜಿ. ತಮ್ಮ ಅಧ್ಯಕ್ಷರ ನುಡಿಗಳಲ್ಲಿ ಕನ್ನಡದ ಬಗ್ಗೆ ಸೊಗಸಾದ ಗೀತೆ ಹಾಡಿ ಮಕ್ಕಳಿಗೆ ವಿದ್ಯಾರ್ಜನೆಯ ಹಾಗೂ ಮುಂಬರುವ ಪರೀಕ್ಷೆಯ ಬಗ್ಗೆ ತಿಳಿಸಿದರು.
ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಮನೋಹರ್ ಎಸ್. ಚಿಗಟೇರಿ, ಬಿ.ಕೆ ಹನುಮಂತಪ್ಪ, ಹೆಚ್.ಎಂ ಸಂಜೀವ ಕುಮಾರ್, ಕೆ.ಆರ್. ರುದ್ರಪ್ಪ ಇತರರು ಇದ್ದರು.