ಧ.ರಾ.ಮ. ವಿಜ್ಞಾನ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ಹಿರಿಯ ವೈದ್ಯ ಡಾ. ಎ.ಎಂ. ಶಿವಕುಮಾರ್
ದಾವಣಗೆರೆ, ಡಿ. 22- ಡಿಆರ್‌ಎಂ ಕಾಲೇಜಿಗೆ ತನ್ನದೇ ಆದ ಒಂದು ಐತಿಹಾಸಿಕ ಹಿನ್ನೆಲೆ ಇದೆ. ಇದು ನಿರಂತರವಾಗಿ ವಿದ್ಯಾದಾನ ಮಾಡುತ್ತಿರುವ ಕಾಲೇಜಾಗಿದೆ. ಇದರ ಬೆಳವಣಿಗೆಗೆ ನಾವೆಲ್ಲರೂ ಕೈಜೋಡಿಸೋಣ ಎಂದು ಕಿವಿ, ಮೂಗು, ಗಂಟಲು ತಜ್ಞ ವೈದ್ಯ ಡಾ. ಎ.ಎಂ. ಶಿವಕುಮಾರ್ ಹೇಳಿದರು.
ನಗರದ ಧ.ರಾ.ಮ. ವಿಜ್ಞಾನ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ. ಸ್ವಾಮಿ ತ್ರಿಭುವಾನಂದ ಮಾತನಾಡಿ, ಈ ಕಾಲೇಜಿನಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಪುನಃ ಕಾಲೇಜಿಗೆ ಏನಾದರೂ ಕೊಡುಗೆ ನೀಡಬೇಕೆಂಬ ಪ್ರವೃತ್ತಿ ಬೆಳೆಸಿಕೊಳ್ಳ ಬೇಕೆಂದರು.
ಪ್ರೊ. ಹಾಲಪ್ಪ ಅವರು ತಮ್ಮ ಸೇವಾವಧಿಯ ಅನುಭವಗಳನ್ನು ಮೆಲುಕು ಹಾಕಿದರು. ಸಂಘದ ಉಪಾಧ್ಯಕ್ಷ ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಅವರು, ಕಲಿತ ಕಾಲೇಜಿಗೆ ಏನಾದರೂ ತಮ್ಮಿಂದ ಸಹಾಯ ಮಾಡುವ ಗುಣ ಧರ್ಮಗಳನ್ನು ಅಳವಡಿಸಿಕೊಳ್ಳುವ ಮನೋಭಾವ ಪ್ರತಿಯೊಬ್ಬರಲ್ಲೂ ಬರಬೇಕು ಎಂದು ಸಲಹೆ ನೀಡಿದರು.
ಹಿರಿಯ ಮುಖಂಡ ಕೆ.ಬಿ. ಶಂಕರ ನಾರಾಯಣ, ಹಿರಿಯ ಸಾಹಿತಿ – ಪತ್ರಕರ್ತ ಬಾ. ಮ. ಬಸವರಾಜಯ್ಯ ಮತ್ತು ಇತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಕಾಲೇಜಿನ ಹಳೆಯ ವಿದ್ಯಾರ್ಥಿನಿ ತೇಜಸ್ವಿನಿ ಭರತನಾಟ್ಯ ಪ್ರದರ್ಶಿಸಿದರು. ಪ್ರಾಚಾರ್ಯರಾದ ಎಂ.ಪಿ. ರೂಪಶ್ರೀ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಹೆಚ್.ಬಿ.ವಿ. ಸೌಮ್ಯ ನಿರೂಪಿಸಿದರು. ಡಿ.ಸಿ. ಹರೀಶ ಕುಮಾರ್ ವಂದಿಸಿದರು. ವಿಶ್ರಾಂತ ಪ್ರಾಂಶುಪಾಲ ಪ್ರೊ.ಎನ್. ಶ್ರೀನಿವಾಸ್, ಪ್ರೊ. ಚಿಕ್ಕೇಗೌಡರ್, ಪ್ರೊ. ಎಸ್.ಜಿ.ಹಿರೇಮಠ್, ಪ್ರೊ ಶಂಕರಪ್ಪ, ಪ್ರೊ. ಗುರುಸಿದ್ಧಸ್ವಾಮಿ, ಪ್ರೊ. ಶಿವಣ್ಣ ಮತ್ತಿತರರು ಭಾಗವಹಿಸಿದ್ದರು.