ತುರ್ಚಘಟ್ಟ : ಮಕ್ಕಳಿಗೆ ನಗದು ಠೇವಣಿ ಪತ್ರಗಳ ವಿತರಣೆ

ತುರ್ಚಘಟ್ಟ : ಮಕ್ಕಳಿಗೆ ನಗದು ಠೇವಣಿ ಪತ್ರಗಳ ವಿತರಣೆ

ದಾವಣಗೆರೆ, ಡಿ. 22- ಸಮೀಪದ ತುರ್ಚಘಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನಗದು ಠೇವಣಿ ಪತ್ರಗಳ ವಿತರಣೆ ಸಮಾರಂಭವನ್ನು ದಾವಣಗೆರೆ ಲಯನ್ಸ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. 

ಲಯನ್ ಅಧ್ಯಕ್ಷ  ಎಸ್.ಜಿ. ಉಳವಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ದೊರೆಯುತ್ತಿರುವ ಶಿಕ್ಷಣದ ವ್ಯವಸ್ಥೆಯನ್ನು ಕೊಂಡಾಡಿದರು. ಮುಖ್ಯ ಅತಿಥಿಗಳಾಗಿ ಮಹಾಂತೇಶ್ ಒಣರೊಟ್ಟಿ,  ಕಾರ್ಯದರ್ಶಿ ಸಿ. ಅಜಯ್ ನಾರಾಯಣ್, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್, ಗ್ರಾಮದ ಹಿರಿಯ ಸಿದ್ದಲಿಂಗಯ್ಯ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಕಲ್ಪನಾ ಭಾಗವಹಿಸಿದ್ದರು. ಶಿಕ್ಷಕಿ ಶ್ರೀಮತಿ ಸುಮಿತ್ರ ಕಾರ್ಯಕ್ರಮ ನಿರೂಪಿಸಿದರು. 

error: Content is protected !!