ಶಾಸಕ ಶಿವಗಂಗಾ ಬಸವರಾಜ್‌ ನಡೆ ಖಂಡನೀಯ

ದಾವಣಗೆರೆ, ಡಿ.22- ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ವಿರುದ್ಧ ಹೈಕಮಾಂಡ್‌ಗೆ ಪತ್ರ ಬರೆದು ಅಗೌರವದಿಂದ ನಡೆದುಕೊಂಡ ಶಾಸಕ ಶಿವಗಂಗಾ ಬಸವರಾಜ್‌ ಅವರ ನಡೆ ಖಂಡನೀಯವಾಗಿದ್ದು, ಕೂಡಲೇ ಅವರು ಸಚಿವರ ಬಳಿ ಕ್ಷಮೆಯಾಚಿಸಬೇಕು ಎಂದು ಉತ್ತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಜಿ. ಶಿವಕುಮಾರ್‌ ಒತ್ತಾಯಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌.ಎಸ್‌. ಮಲ್ಲಿಕಾರ್ಜುನ್‌ ಅವರ ಕೃಪೆಯಿಂ ದಲೇ ಶಿವಗಂಗಾ ಬಸವರಾಜ್‌ ಅವರು ಅಂದು ಪಾಲಿಕೆ ಯಲ್ಲಿ ಸದಸ್ಯರಾಗಿ, ಇಂದು ಚನ್ನಗಿರಿ ಶಾಸಕರಾಗಿದ್ದಾರೆ. ಇದನ್ನು ಅವರು ಮರೆಯಬಾರದು ಎಂದರು.

`ಸ್ವಪಕ್ಷದ ಹಿರಿಯರನ್ನು ಗೌರವದಿಂದ ಕಾಣುವುದನ್ನು ಮೊದಲು ಕಲಿಯಿರಿ. ಅದನ್ನು ಬಿಟ್ಟು ಹೈಕಮಾಂಡ್‌ಗೆ ಪತ್ರ ಬರೆದರೆ ನೀವೇನು ದೊಡ್ಡವರಾಗುವುದಿಲ್ಲ.’ ಶಾಮನೂರು ಕುಟುಂಬ ಪಕ್ಷಕ್ಕೆ ಎಷ್ಟು ಸೇವೆ ಸಲ್ಲಿಸಿದೆ ಎಂಬುದು ಹೈಕಮಾಂಡ್‌ಗೆ ಗೊತ್ತಿದೆ ಎಂದು ಬಸವರಾಜ್‌ ವಿರುದ್ಧ ಕಿಡಿಕಾರಿದರು.

ಚನ್ನಗಿರಿ ಕ್ಷೇತ್ರದ ಜನತೆಯ ಆಶಯಕ್ಕೆ ಸ್ಪಂದಿಸದೇ ಯಾರದ್ದೋ ಕುಮ್ಮಕ್ಕಿನಿಂದ ಸಚಿವರ ವಿರುದ್ಧ ಮಾತನಾಡುತ್ತೀದ್ದಿರಿ ಎನ್ನಿಸುತ್ತಿದೆ. ಇಂತಹ ಬೆಳವಣಿಗೆಯನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಆಯೂಬ್‌ ಪೈಲ್ವಾನ್‌,  ಪಾಲಿಕೆ ಸದಸ್ಯರಾದ ಎ.ನಾಗರಾಜ್‌, ಗಡಿಗುಡಾಳ್‌ ಮಂಜುನಾಥ್‌, ಬ್ಲಾಕ್‌ ಕಾಂಗ್ರೆಸ್‌ ಮಹಿಳಾ ಘಟಕದ ಮಂಜುಳಾ, ಮಂಜಮ್ಮ, ಎಲ್‌.ಹೆಚ್‌. ಸಾಗರ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!