ಡಿಹೆಚ್‌ಯುಎಸ್ ಎಂಪ್ಲಾಯೀಸ್ ಯೂನಿಯನ್ ನೇತೃತ್ವದಲ್ಲಿ ಕ್ರಿಕೆಟ್ ಪಂದ್ಯಾವಳಿ

ಡಿಹೆಚ್‌ಯುಎಸ್ ಎಂಪ್ಲಾಯೀಸ್ ಯೂನಿಯನ್ ನೇತೃತ್ವದಲ್ಲಿ ಕ್ರಿಕೆಟ್ ಪಂದ್ಯಾವಳಿ

ದಾವಣಗೆರೆ ಅರ್ಬನ್ ಬ್ಯಾಂಕ್ ಪ್ರಥಮ, ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ದ್ವಿತೀಯ, ಬಾಪೂಜಿ ಸಹಕಾರಿ ಬ್ಯಾಂಕ್ ತೃತೀಯ

ದಾವಣಗೆರೆ, ಡಿ. 22- ಇಂದಿಲ್ಲಿ ಮುಕ್ತಾಯಗೊಂಡ ಸ್ಥಳೀಯ ಸಹಕಾರ ಬ್ಯಾಂಕುಗಳ, ಉದ್ಯೋಗಿಗಳ ಸಹಕಾರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ತಂಡ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಪಂದ್ಯಾವಳಿಯ ಆಯೋಜಕರಾಗಿದ್ದ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕಿನ ತಂಡವು
ದ್ವಿತೀಯ ಸ್ಥಾನ ಗಳಿಸಿದರೆ, ಬಾಪೂಜಿ ಸಹಕಾರ ಬ್ಯಾಂಕಿನ ತಂಡ ತೃತೀಯ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ತೃಪ್ತಿಪಟ್ಟುಕೊಂಡಿತು.

ದಾವಣಗೆರೆ ಅರ್ಬನ್ ಬ್ಯಾಂಕ್, ಶ್ರೀ ಕನ್ನಕಾ
ಪರಮೇಶ್ವರಿ ಬ್ಯಾಂಕ್, ದಾವಣಗೆರೆ -ಹರಿಹರ ಅರ್ಬನ್ ಬ್ಯಾಂಕ್ ಮತ್ತು ಬಾಪೂಜಿ ಬ್ಯಾಂಕುಗಳ ತಂಡಗಳು ಸೆಮಿಫೈನಲ್ ತಲುಪಿದಾಗ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಮತ್ತು ದಾವಣಗೆರೆ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ತಂಡಗಳು ಅಂತಿಮ ಪಂದ್ಯಕ್ಕೆ ಅಣಿಯಾದವು. 

ಈ ಎರಡೂ ತಂಡಗಳ ನಡುವೆ ನಡೆದ ಪಂದ್ಯವು ಅತ್ಯಂತ ರೋಚಕತೆಯಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿತ್ತು. ಅಂತಿಮ ಪಂದ್ಯದಲ್ಲಿ ದಾವಣಗೆರೆ ಅರ್ಬನ್ ಕೋ – ಆಪರೇಟಿವ್ ಬ್ಯಾಂಕ್ ತಂಡ ಗೆದ್ದು, ಪ್ರಥಮ ಸ್ಥಾನದೊಂದಿಗೆ ಕಪ್ ಅನ್ನು ತನ್ನದಾಗಿಸಿಕೊಂಡಿತು.

ಹತ್ತು ಸಾವಿರ ರೂ. ನಗದು ಹಣದ ಜೊತೆಗೆ, ಆಕರ್ಷಕ ಟ್ರೋಫಿಯನ್ನು ಈ ತಂಡ ಪಡೆಯಿತು.

ರನ್ನರ್ ಅಪ್ ತಂಡ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ದ್ವಿತೀಯ ಸ್ಥಾನದೊಂದಿಗೆ 7,500 ರೂ. ನಗದು ಮತ್ತು ಆಕರ್ಷಕ ಟ್ರೋಫಿ ಗಳಿಸಿತು.

ಅದೇ ರೀತಿ ತೃತೀಯ ಸ್ಥಾನ ಪಡೆದ ಬಾಪೂಜಿ ಸಹಕಾರಿ ಬ್ಯಾಂಕ್ ತಂಡ 5 ಸಾವಿರ ರೂ. ನಗದು ಹಣದೊಂದಿಗೆ ಆಕರ್ಷಕ ಟ್ರೋಫಿ ಪಡೆಯಿತು.

ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ತಂಡದ ಮಹೇಶ್ ಉತ್ತಮ ಬೌಲರ್ ಅಗಿ, ವಿಶ್ವನಾಥ್ ಉತ್ತಮ ಬ್ಯಾಟ್ಸ್‌ಮನ್ ಆಗಿ, ಟಿ.ಆರ್. ರುದ್ರೇಶ್ ಮತ್ತು ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕಿನ ಲೋಕೇಶ್ ಉತ್ತಮ ಆಲ್‌ರೌಂಡರ್ ಆಗಿ ವೈಯಕ್ತಿಕ ಬಹುಮಾನಗಳನ್ನು ಪಡೆದುಕೊಂಡರು.   ಸಿಕ್ಸರ್ ಬಾರಿಸಿದ ಎಲ್ಲಾ ತಂಡದ 16 ಆಟಗಾರರಿಗೆ ತಲಾ 500 ರೂ. ಬಹುಮಾನವನ್ನು ದಾವಣಗೆರೆ – ಹರಿಹರ ಸಹಕಾರ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್ ಅವರು ವೈಯಕ್ತಿಕವಾಗಿ ನೀಡಿದರು.

ಬಹುಮಾನ ವಿತರಣೆ : ಪಂದ್ಯಾವಳಿಯ ನಂತರ ಏರ್ಪಾಡಾಗಿದ್ದ ಸಮಾರೋಪ ಸಮಾರಂಭದಲ್ಲಿ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಅಧ್ಯಕ್ಷ
ಎನ್.ಎ. ಮುರುಗೇಶ್, ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಬಿ.ಸಿ. ಉಮಾಪತಿ,
ಶ್ರೀ ಕನ್ನಕಾ ಪರಮೇಶ್ವರಿ ಕೋ-ಆಪರೇಟಿವ್ ಬ್ಯಾಂಕ್
ಅಧ್ಯಕ್ಷ ಆರ್.ಜಿ. ಶ್ರೀನಿವಾಸಮೂರ್ತಿ, ವಿಕಾಸ್ ಬ್ಯಾಂಕ್‌ನ ಹಿರೇಮಠ ಅವರುಗಳು ವಿಜೇತ ತಂಡಗಳಿಗೆ
ಬಹುಮಾನ ವಿತರಣೆ ಮಾಡಿದರು.

ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ನಿರ್ದೇಶಕರುಗಳಾದ ಎ.ಹೆಚ್. ಕುಬೇರಪ್ಪ, ಕಿ
ರುವಾಡಿ ಸೋಮಶೇಖರ್, ಪ್ರಭು ಪ್ರಸಾದ್, ಬಿ. ಚಿದಾನಂದಪ್ಪ, ಕಿರಣ್, ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ನಿರ್ದೇಶಕರುಗಳಾದ
 ಹೆಚ್.ಎಂ. ರುದ್ರಮುನಿ ಸ್ವಾಮಿ, ಇ.ಎಂ. ಮಂಜುನಾಥ ಅವರುಗಳಲ್ಲದೇ ವಿವಿಧ ಸಹಕಾರ ಬ್ಯಾಂಕುಗಳ
ಆಡಳಿತ ಮಂಡಳಿಯ ಸದಸ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ  ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್,  ತಮ್ಮ ಬ್ಯಾಂಕ್ 50ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಈ ಹಿನ್ನೆಲೆಯಲ್ಲಿ ತಮ್ಮ ಬ್ಯಾಂಕಿನ ನೌಕರರ ನೇತೃತ್ವದಲ್ಲಿ ಇದೇ ಪ್ರಪ್ರಥಮ ಬಾರಿಗೆ ಸಹಕಾರ ಬ್ಯಾಂಕಿನ ಉದ್ಯೋಗಿಗಳಿಗಾಗಿ ಈ ಪಂದ್ಯಾವಳಿಯನ್ನು ನಡೆಸಿರುವುದು ತಮಗೆ ಸಂತಸ ವನ್ನುಂಟು ಮಾಡಿದೆ. ಮುಂಬರುವ ದಿನಗಳಲ್ಲಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಪಂದ್ಯವನ್ನು ನಡೆಸುವುದಾಗಿ ತಿಳಿಸಿದರು.

ಡಿಸಿಸಿ ಬ್ಯಾಂಕಿನ ಮಂಜುನಾಥ್ ಮತ್ತು ಡಿಹೆಚ್‌ಯುಎಸ್ ಬ್ಯಾಂಕಿನ ಪಿ.ಆರ್. ಪ್ರಕಾಶ್ ಅವರು ಜಂಟಿಯಾಗಿ ಪಂದ್ಯದ ವಿಶ್ಲೇಷಣೆ ಮಾಡಿದರು. ಡಿಹೆಚ್‌ಯುಎಸ್ ಬ್ಯಾಂಕಿನ ತಾಂತ್ರಿಕ ವಿಭಾಗದ ಪಿ.ಆರ್.ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

error: Content is protected !!