ಕಾಯಿಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಂಘದ ವತಿಯಿಂದ ಇಂದು ರಾತ್ರಿ 9 ಗಂಟೆಗೆ ಕಡೆ ಕಾರ್ತಿಕೋತ್ಸವ ನಡೆಯಲಿದೆ.
ನಾಳೆ ಮಂಗಳವಾರ ಮತ್ತು ನಾಡಿದ್ದು ಬುಧವಾರ ಪೂಜಾ ಇಂಟರ್‌ನ್ಯಾಷನಲ್ ಪಕ್ಕದಲ್ಲಿರುವ ಶ್ರೀ ಮಹೇಶ್ವರ ಸ್ವಾಮಿಯ ನಿವೇಶನದಲ್ಲಿ ಶ್ರೀ ಮಹೇಶ್ವರ ಸ್ವಾಮಿಯ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ತಿಳಿಸಿದೆ.
ವಿಶೇಷ ಸೂಚನೆ : ಶ್ರೀ ಕರಿಯಾಂಬಿಕಾ ದೇವಿ ಭಜನಾ ಮಂಡಳಿ, ಕ್ಯಾರೆಕಟ್ಟೆ ಹರಪನಹಳ್ಳಿ ಇವರಿಂದ ಎರಡು ದಿವಸ ರಾತ್ರಿ 10 ರಿಂದ ಭಜನಾ ಕಾರ್ಯಕ್ರಮವಿರುತ್ತದೆ.