ದಾವಣಗೆರೆ, ಡಿ. 20- ಮಹಾನಗರ ಪಾಲಿಕೆಯ ವಾರ್ಡ್ ನಂ. 39 ರಲ್ಲಿ ತರಳಬಾಳು ಬಡಾವಣೆ 11ನೇ ಕ್ರಾಸ್‌ನಲ್ಲಿರುವ ಸಾರ್ವಜನಿಕ ಉದ್ಯಾನವನಕ್ಕೆ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸವಿತಾ ಹುಲ್ಮನಿ ಗಣೇಶ್ ಭೇಟಿ ನೀಡಿದ್ದರು.
ಸುತ್ತಲಿನ ಮಹಿಳೆಯರ ಕೋರಿಕೆಯ ಮೇರೆಗೆ ಉದ್ಯಾನವನದಲ್ಲಿ ಮಹಿಳೆಯರಿಗಾಗಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಯೋಗಾಸಕ್ತ ಮಹಿಳೆಯರಿಗಾಗಿ ಪ್ರತ್ಯೇಕ ಯೋಗ ವೇದಿಕೆ ನಿರ್ಮಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಇಲ್ಲಿ ನಡೆಸುವ ಯೋಗಾಭ್ಯಾಸದಿಂದ ಮಹಿಳೆಯರಿಗೆ ಸದೃಢ ಮನಸ್ಸು ಮತ್ತು ಆರೋಗ್ಯ ನಿರ್ಮಾಣ ವಾಗಲಿ ಎಂದು ಆಶಿಸಿದರು. ತುರ್ತಾಗಿ ಮುಂಜಾನೆ ವಾಕಿಂಗ್ ಮಾಡುವವರಿಗಾಗಿ ಪಾತ್ ವೇ ನಿರ್ಮಾಣದ ಜೊತೆಗೆ ಇತರೆ ಸೌಲಭ್ಯಗಳನ್ನೂ ಅಭಿವೃದ್ಧಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು.