ಸ್ವಾಭಿಮಾನಿ ಬಳಗದ ನೇತೃತ್ವದಲ್ಲಿ `ನಮ್ಮ ನಡೆ ಸರಕಾರಿ ಶಾಲೆಗಳ ಕಡೆಗೆ’ ಅಭಿಯಾನ
ನ್ಯಾಮತಿ, ಡಿ. 18- ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಹುತೇಕ ಮಕ್ಕಳು ಬಡವ ರಾಗಿದ್ದು, ಅವರಲ್ಲಿ ಬಹುಮುಖ ಪ್ರತಿಭೆ ಇರುತ್ತದೆ. ಅದರೆ ಸರ್ಕಾರಿ ಶಾಲೆಗಳಲ್ಲಿ ಬಹು ಮುಖ್ಯವಾಗಿ ಗ್ರಂಥಾಲಯದ ಅವಶ್ಯಕತೆ ಇದೆ. ಬಹುತೇಕ ಶಾಲೆಗಳಲ್ಲಿ ಗಂಥಾಲಯವಿಲ್ಲ. ಪ್ರತಿ ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯವನ್ನು ಸರ್ಕಾರ ಒದಗಿಸಿದರೆ ಬಡ ಮಕ್ಕಳಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯಕುಮಾರ್ ಹೇಳಿದರು.
ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ಗ್ರಾಮದ ಸರ್ಕಾರಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಸ್ವಾಭಿಮಾನಿ ಬಳಗದಿಂದ ಆಯೋಜಿಸಿದ್ದ ಶಿಕ್ಷಣ ಅದಾಲತ್ – `ನಮ್ಮ ನಡೆ ಸರಕಾರಿ ಶಾಲೆಗಳ ಕಡೆಗೆ’ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಅಭಿಯಾನದ ಮುಖ್ಯ ಉದ್ದೇಶ ಸರ್ಕಾರಿ ಶಾಲೆಗಳ ಸ್ಥಿತಿ ಗತಿಯ ಬಗ್ಗೆ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ಕಂಡುಕೊಳ್ಳುವು ದಾಗಿದೆ. 29 ಪ್ರಶ್ನೆಗಳನ್ನು ಒಳ ಗೊಂಡ ಮಾದರಿಯಲ್ಲಿ ಭೇಟಿ ನೀಡಿದ ಶಾಲೆಯ ವಿವರ ದಾಖಲಿಸಿಕೊಳ್ಳಲಾಗುವುದು ಎಂದರು.
ನ್ಯಾಮತಿ ತಾಲೂಕಿನ ಬಹುತೇಕ ಶಾಲೆ ಗಳಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದ ಮಕ್ಕಳೇ ಹೆಚ್ಚು ಓದುತ್ತಿರುವುದು ಕಂಡು ಬಂದಿದೆ. ತಾಲ್ಲೂಕಿನ ಹಳೆ ಜೋಗದಲ್ಲಿ ದೊಡ್ಡ ಶಾಲೆಯಿದ್ದು, ಒಂದರಿಂದ ಏಳನೇ ತರಗತಿಯ ವರೆಗೆ 21 ಮಕ್ಕಳು ಮಾತ್ರ ಶಾಲೆಗೆ ಬರುತ್ತಿ ದ್ದಾರೆ. ಇದಕ್ಕೆ ಸರ್ಕಾರಿ ಶಾಲೆಗಳು ಮಳೆಗಾಲ ಬಂದರೆ ಸೋರುತ್ತವೆ. ಶಾಲೆಗಳಲ್ಲಿ ಆಟದ ಮೈದಾನವಿಲ್ಲ, ಮೈದಾನವಿದ್ದರೂ ಯೋಗ್ಯ ವಾಗಿಲ್ಲ. ಇವುಗಳನ್ನು ನರೇಗಾ ಯೋಜನೆಯಡಿ ಯಲ್ಲಿ ಅಭಿವೃದ್ಧಿ ಮಾಡಬಹುದು. ಇದರ ಮಾಹಿತಿ ಶಾಲಾ ಅಭಿವೃದ್ಧಿ ಸಮಿತಿಗೆ ಇಲ್ಲದ ಕಾರಣ ಸರ್ಕಾರದ ಅಥವಾ ಸ್ಥಳೀಯ ಆಡಳಿತ ಮಂಡಳಿಯನ್ನು ಕಾಯುತ್ತಿದ್ದಾರೆ. ಇದರಿಂದ ಬಡ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲವೆಂದರು.
ನಮ್ಮ ದೇಶದಲ್ಲಿ ಶಿಕ್ಷಣದ ಜಿಡಿಪಿ ಎರಡರಷ್ಟಿದ್ದರೆ, ಚೈನಾದಲ್ಲಿ ಶೇ 8.5 ಇದೆ ಬೇರೆ ದೇಶಕ್ಕೆ ಹೋಲಿಸಿದ್ದಾರೆ. ನಮ್ಮಲ್ಲಿ ಶಿಕ್ಷಣದ ಜಿಡಿಪಿ ಕಡಿಮೆ ಇದೆ. ಹಾಗಾಗಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ವಿವಿಧ ಕಂಪನಿಗಳಲ್ಲಿ ಸಿ ಎಸ್ ಆರ್ ಫಂಡ್ ಬಳಕೆ ಮಾಡಿ ತನ್ಮೂಲಕ ಶಾಲೆಗಳಲ್ಲಿ ಹೊಸ ರೂಪ ನೀಡುವುದು ಪ್ರವಾಸದ ಅತಿ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಭೇಟಿ ನೀಡಿದ ಶಾಲೆಯಲ್ಲಿ ಸ್ವಾಭಿಮಾನಿ ಬಳಗದ ತಂಡದಿಂದ 29 ಪ್ರಶ್ನೆಗಳನ್ನು ಒಳಗೊಂಡ ಮಾದರಿಯಲ್ಲಿ ಶಾಲೆಯ ವಿವರವನ್ನು ಫಾರಂನಲ್ಲಿ ಮಾಹಿತಿ ದಾಖಲಿಸಿ, ಶಿಕ್ಷಕರ, ಎಸ್ಡಿಎಂಸಿ ಸದಸ್ಯರ ಪೋಷಕರ ಹಾಗೂ ಶಾಲಾ ಮಕ್ಕಳೊಂದಿಗೆ ಸಂವಾದವನ್ನು ನಡೆಸಿ ಭಾರತ ಸಂವಿಧಾನ ಪೀಠಿಕೆ ಓದಿ ಮಕ್ಕಳಲ್ಲಿ ಪ್ರಮಾಣ ಮಾಡಿಸುವ ಮೂಲಕ ಒಂದು ಫೋಟೋವನ್ನು ಶಾಲೆಗೆ ನೀಡಿದರು.
ಸೂರಗೊಂಡನಕೊಪ್ಪ, ಹಳೇಜೋಗ, ಹೊಸ ಜೋಗ, ಮಾದಾಪುರ, ಕೂಡತಾಳು, ಸವಳಂಗ ಗ್ರಾಮಗಳ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ, ಶಾಲಾ ಕೊಠಡಿ, ಮೈದಾನ, ಬಿಸಿ ಊಟ ಯೋಜನೆ, ಶೌಚಾಲಯ ಭದ್ರತೆ, ಶಿಕ್ಷ ಣದ ಗುಣಮಟ್ಟಗಳ ಪರಿಶೀಲನೆ ನಡೆಸಿದರು.
ಸ್ವಾಭಿಮಾನಿ ಬಳಗದ ರಾಜ್ಯ ಕಾರ್ಯ ದರ್ಶಿ ರಾಜು ಮೌರ್ಯ. ರಾಜ್ಯ ಸಂಚಾಲಕ ಅಯ್ಯಣ್ಣ, ಶಿವಕುಮಾರ್ ಸಾಂಬಳಿ, ಹೊನ್ನಾಳಿ ರಾಜು ಕಡಗಣ್ಣರ, ಪ್ರದೀಪ್, ಗಂಜೀನಹಳ್ಳಿ ನಾಗೇಶ್ ಸೇರಿದಂತೆ ಇತರರು ಇದ್ದರು.