ಮಲೇಬೆನ್ನೂರು, ಡಿ. 18- ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ಪಿ. ಗಂಗಾಧರ್ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಯುನೂಸ್ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಸಹಕಾರಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸುನೀತಾ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಸಂಘದ ಸಿಇಓ ಸಿದ್ಧಪ್ಪ, ಸಿಬ್ಬಂದಿಗಳಾದ ಪ್ರಕಾಶ್, ಜಫರತ್ ಸಹಕರಿಸಿದರು.
ಸಂಘದ ನಿರ್ದೇಶಕರಾದ ಸಿರಿಗೆರೆ ರಾಜಣ್ಣ, ಜಿ.ಮಂಜುನಾಥ ಪಟೇಲ್, ಎಂ. ಬಿ. ಗುಲ್ಜಾರ್, ಸಿ.ಅಬ್ದುಲ್ ಹಾದಿ, ಪಿ.ಆರ್. ಕುಮಾರ್, ಬಿ. ಸೈಫುಲ್ಲಾ, ಯುನೂಸ್, ಶ್ರೀಮತಿ ರೇವಮ್ಮ, ಐರಣಿ ಪುಟ್ಟಪ್ಪ, ಶ್ರೀಮತಿ ಚಂದ್ರಮ್ಮ ಅವರುಗಳು ಹಾಜರಿದ್ದು ಅವಿರೋಧ ಆಯ್ಕೆಗೆ ಸಹಕರಿಸಿದರು.