ನೀರು ಸರಬರಾಜು ಯೋಜನೆ ಕಾಮಗಾರಿ ಪ್ರಗತಿ ವೀಕ್ಷಿಸಿದ ಸವಿತಾ ಹುಲ್ಲುಮನೆ

ನೀರು ಸರಬರಾಜು ಯೋಜನೆ ಕಾಮಗಾರಿ ಪ್ರಗತಿ ವೀಕ್ಷಿಸಿದ ಸವಿತಾ ಹುಲ್ಲುಮನೆ

ದಾವಣಗೆರೆ, ಡಿ. 17- ಮಹಾನಗರ ಪಾಲಿಕೆಗೆ ಜಲಸಿರಿ ಯೋಜನೆ ಯಡಿಯಲ್ಲಿ ಕೆಯುಐಡಿಎಫ್‌ಸಿ ವತಿಯಿಂದ ಕೈಗೊಂ ಡಿರುವ 24 X 7 ನೀರು ಸರಬರಾಜು ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಕಾಮಗಾರಿ ಪ್ರಗತಿಯನ್ನು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಲು ಮನೆ ಗಣೇಶ್ ಅವರು ಅಧಿಕಾರಿಗಳೊಂದಿಗೆ ರಾಜನಹಳ್ಳಿ, ಬಾತಿ ಪಂಪ್‌ಹೌಸ್‌ಗಳಿಗೆ ನಿನ್ನೆ ಭೇಟಿ ನೀಡಿ ಪರಿಶೀಲಿಸಿದರು.

ಹಲವಾರು ವಾರ್ಡ್‌ಗಳಲ್ಲಿ ಪ್ರತಿ ಮನೆಗಳಿಗೂ ಅಗತ್ಯವಿರುವ ನೀರಿನ ವ್ಯವಸ್ಥಿತ ಸರಬರಾಜು ಮಾಡಲು ತುರ್ತಗಿ ಬಾತಿಯಲ್ಲಿನ 40 ಎಂ.ಎಲ್.ಡಿ ನೀರು ಶುದ್ಧೀಕರಣ ಘಟಕವನ್ನು ಕಾರ್ಯಾರಂಭಗೊಳಿಸಬೇಕು ಮತ್ತು ಇದಕ್ಕೆ ಅವಶ್ಯಕವಾಗಿರುವ ವಿದ್ಯುತ್  ಇಲಾಖೆಯ ತಾಂತ್ರಿಕ ಅನುಮೋದನೆಯನ್ನು ಶೀಘ್ರವಾಗಿ ಪಡೆದು, ವಿದ್ಯುತ್ ಸಂಪರ್ಕ ಕಲ್ಪಿಸಿ ಚಾಲನೆಗೊಳಿಸಲು ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಂತೆಯೇ ಬಾತಿ ಹತ್ತಿರ ರೈತರ ಜಮೀನಿನಲ್ಲಿ ಪಾಲಿಕೆಯ ನೀರು ಸರಬರಾಜು ಪೈಪ್ ಒಡೆದು ಸೋರಿಕೆಯಾಗುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಇದರಿಂದ ಪೈಪ್ ಲೈನ್  ಹಾದು ಹೋಗಿರುವ ರೈತರ ಬೆಳೆಗಳಿಗೆ ತೊಂದರೆ ಯಾಗದಂತೆ ಮತ್ತು ಈಗಾಗಲೇ ನಗರದಲ್ಲಿ ನೀರು ಸರಬರಾಜಿನಲ್ಲಿ ತೊಂದರೆಯಾಗಿದ್ದು, ಶೀಘ್ರವಾಗಿ ದುರಸ್ತಿ ಕಾಮಗಾರಿ ಪೂರ್ಣಗೊಳಿಸಿ ನಗರಕ್ಕೆ ನೀರು ಸರಬರಾಜು ಮಾಡಲು ಸೂಕ್ತ ಕ್ರಮ ವಹಿಸುವಂತೆ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

error: Content is protected !!