ಹರಿಹರ, ಡಿ.16- ಶಿವನಹಳ್ಳಿ ಗ್ರಾಮದಲ್ಲಿ ಇದೇ ದಿನಾಂಕ 22 ರಂದು ಭಾನುವಾರ ದಾಸೋಹ ಭವನ, ಭಕ್ತಿ ಭವನ ಲೋಕಾರ್ಪಣೆ ನಿಮ್ಮಿತ್ತವಾಗಿ ಶ್ರೀ ಹಿಮವತ್ ಕೇದಾರ ಭೀಮಾಶಂಕರಲಿಂಗ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ಹಾಗೂ ಪರಂಪರೆ ರಕ್ಷಣಾ ಧರ್ಮ ಸಮಾರಂಭವು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ಶ್ರೀ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿದೆ.
ಬೆಳಗ್ಗೆ 7-30 ರಿಂದ ಮಹಾಸಂಕಲ್ಪ, 8ಕ್ಕೆ ರುದ್ರಾಭಿಷೇಕ, 9 ಕ್ಕೆ ಸಂಗೀತಯುಕ್ತ ಆರಂತಿಗಳ ಪೂಜೆ, ಮಧ್ಯಾಹ್ನ 12-30 ಕ್ಕೆ ಧರ್ಮ ಸಮಾರಂಭ, 1-30 ಕ್ಕೆ ಜಗದ್ಗುರು ಗಳವರ ದರ್ಶನಾಶೀರ್ವಾದ ನೀಡಲಿದ್ದಾರೆ ಎಂದು ಶಿವಯೋಗಿ ಕಂಬಳಿಮಠ ತಿಳಿಸಿದ್ದಾರೆ.