ದಾವಣಗೆರೆ, ಡಿ. 17- ನಗರ ದೇವತೆ ಶ್ರೀ ದುರ್ಗಾಂ ಬಿಕಾ ದೇವಿ ದೇವಸ್ಥಾನದಲ್ಲಿ ಕಡೇ ಕಾರ್ತಿಕೋತ್ಸವವು ಇದೇ ದಿನಾಂಕ 24ರ ಮಂಗಳವಾರ ರಾತ್ರಿ 8.30 ಗಂಟೆಗೆ ನೆರವೇರಲಿದೆ. ಟ್ರಸ್ಟ್ನ ಗೌರವ ಅಧ್ಯಕ್ಷರೂ ಆದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಕಾರ್ತಿಕೋತ್ಸವಕ್ಕೆ ಚಾಲನೆ ನೀಡುವರು. ಅಂದು ಬೆಳಿಗ್ಗೆ 6 ಕ್ಕೆ ಶ್ರೀ ದುರ್ಗಾಂಬಿಕಾ ದೇವಿಗೆ ಪಂಚಾಮೃತ ಅಭಿಷೇಕ ನಂತರ ಬೆಳಿಗ್ಗೆ 9 ರಿಂದ ಹೂವಿನ ಹಾರದ ಮೆರವಣಿಗೆ ನಡೆಸಲಾಗುವುದು.
December 22, 2024