ನಗರದಲ್ಲಿ ಇಂದು ಕದಳಿ ಮಹಿಳಾ ವೇದಿಕೆ ಸಭೆ

ಕದಳಿ ಮಹಿಳಾ ವೇದಿಕೆಯ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಇಂದು ಬೆಳಿಗ್ಗೆ 10.30ಕ್ಕೆ   ಶಾಮನೂರು ಶಿವಶಂಕರಪ್ಪ ತರಳಬಾಳು ಸಭಾ ಭವನದಲ್ಲಿ ನಡೆಸಲಾಗುವುದು ಎಂದು ಕಾರ್ಯದರ್ಶಿ ಶ್ರೀಮತಿ ಚಂದ್ರಿಕಾ ಮಂಜುನಾಥ್ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ನಡೆಯುವ 160ನೇ ಕಮ್ಮಟದಲ್ಲಿ ಶರಣ ಮಾದಾರ ಚೆನ್ನಯ್ಯ ಮತ್ತು ಶರಣ ಒಕ್ಕಲಿಗರ ಮುದ್ದಣ್ಣ ಸ್ಮರಣೆ, ಆರೋಗ್ಯ ಜಾಗೃತಿ ಹಾಗೂ ಸದಸ್ಯರಿಗೆ ವಿವಿಧ ಆಟಗಳನ್ನು ಏರ್ಪಡಿಸಲಾಗಿದೆ. ಸುನಂದಮ್ಮ ಕೆ.ಆರ್. ಜಯದೇವಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಗಾಯತ್ರಿ ವಸ್ತ್ರದ್ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಡಾ. ಸುಷ್ಮಾ ನಾಡಗೌಡ ಉಪಸ್ಥಿತರಿದ್ದು, ಸರ್ವಿಕಲ್ ಕ್ಯಾನ್ಸರ್ ಮತ್ತು ಬ್ರೆಸ್ಟ್ ಕ್ಯಾನ್ಸರ್ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ.

error: Content is protected !!