ಕೃಷಿಕ ಸಮಾಜದ ಚುನಾವಣೆ
ದಾವಣಗೆರೆ,ಡಿ.17- ದಾವಣಗೆರೆ ಕೃಷಿಕ ಸಮಾಜದ ಚುನಾವಣೆಯು ದಾವಣಗೆರೆಯ ಕೃಷಿ ಇಲಾಖೆಯಲ್ಲಿ ನಿನ್ನೆ ನಡೆಯಿತು.
ಭಾರತೀಯ ರೈತ ಒಕ್ಕೂಟ ಗುಂಪಿನ 15 ಸ್ಥಾನಗಳಿಗೆ 15 ಸದಸ್ಯರು ಪ್ರಚಂಡ ಬಹುಮತದಿಂದ ಆಯ್ಕೆಯಾಗಿದ್ದಾರೆ.
ಹೆಚ್.ಆರ್. ಲಿಂಗರಾಜ್ (ಶಾಮನೂರು), ಎ.ಎಂ. ಮಂಜುನಾಥ್ (ಶಿರಮಗೊಂಡನಹಳ್ಳಿ), ಎ. ಶಿವಪ್ಪ (ಶಾಮನೂರು), ಎಂ.ಎಸ್. ನಾಗರಾಜ್ (ಹೊಸಕುಂದುವಾಡ), ಡಿ.ಕೆ. ಚಂದ್ರಶೇಖರಪ್ಪ (ನಾಗನೂರು), ಎಂ. ನಾಗರಾಜ್ (ಬೇತೂರು), ಯು.ಕೆ. ಚಂದ್ರಶೇಖರಪ್ಪ (ಬಿ.ಕಲಪನಹಳ್ಳಿ), ಜಿ. ಕರಿಬಸಪ್ಪ (ಗೋಪನಾಳು), ಟಿ.ಎಂ. ಮುನಿಯಪ್ಪ (ಹೊನ್ನೂರು), ಟಿ. ಬಸವರಾಜಪ್ಪ (ಹಳೇಬಾತಿ), ಕೆ.ಎಂ. ರೇವಣಸಿದ್ದಪ್ಪ
(ಬಿ. ಕಲಪನಹಳ್ಳಿ), ಎಸ್.ಜಿ. ರುದ್ರೇಶ್ (ಮಾಯಕೊಂಡ), ಯೋಗೇಶ್ವರಪ್ಪ ಎಂ.ವೈ. (ಯರಗುಂಟೆ), ಬಿ. ವಿಶ್ವನಾಥ್ (ಬೇತೂರು), ಬಿ.ಕೆ. ವಿಶ್ವನಾಥ್ (ಬೆಳವನೂರು) ಅವರುಗಳು ಆಯ್ಕೆಯಾಗಿದ್ದಾರೆ.
ಮಾಜಿ ಸಚಿವರೂ ಆದ ಭಾರತೀಯ ರೈತ ಒಕ್ಕೂಟದ ಗೌರವಾಧ್ಯಕ್ಷ ಎಸ್.ಎ. ರವೀಂದ್ರನಾಥ್, ಉಪಾಧ್ಯಕ್ಷ ನಾಗರಾಜ್ ರಾವ್ ಕೊಂಡಜ್ಜಿ ಅವರುಗಳು ವಿಜೇತರಾದ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಅಭಿನಂದಿಸಿದ್ದಾರೆ.