ಹರಿಹರ : 19 ರಂದು ಶ್ರೀ ಕೊಟ್ಟೂರೇಶ್ವರ ಸ್ವಾಮಿ ನೂತನ ಪಂಚಲೋಹದ ಮೂರ್ತಿ ಪ್ರತಿಷ್ಠಾಪನೆ

ಹರಿಹರ : 19 ರಂದು ಶ್ರೀ ಕೊಟ್ಟೂರೇಶ್ವರ ಸ್ವಾಮಿ  ನೂತನ ಪಂಚಲೋಹದ ಮೂರ್ತಿ ಪ್ರತಿಷ್ಠಾಪನೆ

ಹರಿಹರ,ಡಿ.16-  ನಗರದ ಶ್ರೀ ಕೊಟ್ಟೂರೇ ಶ್ವರ ದೇವಸ್ಥಾನದ ಆವರ ಣದಲ್ಲಿ  ಇದೇ ದಿನಾಂಕ 19ರಂದು ಕಾರ್ತಿಕೋತ್ಸವ ಮತ್ತು ಶ್ರೀ ಸ್ವಾಮಿಯ ನೂತನ ಪಂಚಲೋಹದ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಆವರ ಗೊಳ್ಳದ ಹಿರೇಮಠದ ಶ್ರೀ ಓಂಕಾರೇಶ್ವರ ಶಿವಾ ಚಾರ್ಯ ಸ್ವಾಮೀಜಿಯವರಿಂದ ನೆರವೇರಲಿದೆ.

ಶ್ರೀ ಗುರು ಕೊಟ್ಟೂರು ಗುರುಬಸವೇಶ್ವರ ದೇವಸ್ಥಾನ ನಿರ್ಮಾಣ ಸಮಿತಿ ಹಾಗೂ ಪಾದಯಾತ್ರೆ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಏರ್ಪಾಡಾಗಿದೆ.

ಹರ್ಲಾಪುರ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಿಂದ ಮುಂಜಾನೆ ವಿವಿಧ ವಾದ್ಯ ಮೇಳಗಳೊಂದಿಗೆ  ಶ್ರೀ ಸ್ವಾಮಿಯ ಉತ್ಸವ ಮೂರ್ತಿ  ಮೆರವಣಿಗೆಯು   ತುಂಗಭದ್ರಾ ನದಿಗೆ ತೆರಳಿ, ಗಂಗಾ ಪೂಜೆ ನೆರವೇರಿಸಿ ನಂತರ ದೇವಸ್ಥಾನ  ಪ್ರವೇಶಿಸಲಾಗುವುದು.  ಸಂಜೆ 6 ಗಂಟೆಗೆ ಕಾರ್ತೀಕೋತ್ಸವ  ನಂತರ ಪ್ರಸಾದ ವ್ಯವಸ್ಥೆ ಇರುತ್ತದೆ ಎಂದು  ಸಮಿತಿಯ ಅಧ್ಯಕ್ಷ ಮಂಜುನಾಥ್ ಜಿ.  ತಿಳಿಸಿದ್ದಾರೆ

ಈ ಸಂದರ್ಭದಲ್ಲಿ  ಸಮಿತಿಯ ಗೌರವಾಧ್ಯಕ್ಷ ಗಜಪುರದ ವೀರಯ್ಯ, ಅಭಿಯಂತರ ನಾಗರಾಜ್, ಐರಣಿ ಕೊಟ್ರೇಶ್,  ದಯಾನಂದ ಅಣಜಿಮಠ, ದಾವಣಗೆರೆ ಬಸವರಾಜ್, ಕೊಟ್ರೇಶ್ ಬೇಲೂರು, ಕಮಲಾಪುರ ರವಿಕುಮಾರ್, ಶಿವಾನಂದ್ ಬಣಕಾರ್, ನಾಗರಾಜ್ ದೇವಾಸ್, ಎಚ್. ಎಮ್. ಹಾಲಸ್ವಾಮಿ, ಉಮಾಮಹೇಶ್ವರಿ, ಕರಿಬಸಮ್ಮ ಕಮಲಾಪುರ, ಚೆನ್ನೇಶ್, ವಸಂತ್‍ಕುಮಾರ್ ಮಲ್ಲಜ್ಜನವರ ಮತ್ತಿತರರು ಇದ್ದರು.

error: Content is protected !!