ಕ್ಷತ್ರೀಯ ಮರಾಠ ವಿದ್ಯಾವರ್ಧಕ ಸಂಘ, ಶ್ರೀ ಜೀಜಾಮಾತಾ ಮಹಿಳಾ ಮಂಡಳಿ, ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘ ಯುವ ಘಟಕ ಹಾಗೂ ಶ್ರೀ ಅಂಬಾ ಭವಾನಿ ಅಮ್ಮನವರ ಸಾಮೂಹಿಕ ಗೋಂದಳ ಕಾರ್ಯಕ್ರಮ ಸ್ನೇಹ ಬಳಗದ ಸಂಯುಕ್ತಾಶ್ರಯದಲ್ಲಿ ಅಂಬಾಭವಾನಿ ಅಮ್ಮನವರ ಸಾಮೂಹಿಕ ಗೋಂದಳಿ ಪೂಜೆ ಅಂಗವಾಗಿ ಶ್ರೀ ಕೃಷ್ಣಭವಾನಿ ಕಲ್ಯಾಣ ಮಂಟಪದಲ್ಲಿ ಇಂದು ಮತ್ತು ನಾಳೆ ವಿವಿಧ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಇಂದು ಬೆಳಗ್ಗೆ 7 ರಿಂದ 12 ರವರೆಗೆ ಶ್ರೀ ಅಂಬಾ ಭವಾನಿ ಅಮ್ಮನವರಿಗೆ ಪಂಚಾಮೃತ ಅಭಿಷೇಕ ಮಹಾಪೂಜೆ, ನೈವೇದ್ಯ, ವಾದ್ಯ ಪೂಜೆ ನಡೆಯಲಿದೆ. ಸಂಜೆ 6 ಗಂಟೆಗೆ ಶ್ರೀ ದುರ್ಗಾಂಭಿಕ ದೇವಸ್ಥಾನದಿಂದ ಶ್ರೀ ಕೃಷ್ಣಭವಾನಿ ಕಲ್ಯಾಣ ಮಂಟಪಕ್ಕೆ ವಾದ್ಯ ಮೇಳಗಳೊಂದಿಗೆ ಗಂಗಾಪೂಜೆ ಹಾಗೂ ರಾತ್ರಿ 10 ಗಂಟೆಗೆ `ಶ್ರೀ ಅಂಬಾಭವಾನಿ ಗೊಂಧಳ ಕಥಾ’ ಕಾರ್ಯಕ್ರಮ ನಡೆಯಲಿದೆ.
ನಾಳೆ ಬುಧವಾರ ಬೆಳಿಗ್ಗೆ 5 ಗಂಟೆಗೆ ಪತ್ತ ಆಡುವುದು, ಬೆಳಿಗ್ಗೆ 6 ಗಂಟೆಗೆ ಪರಶುರಾಮ ಪೂಜೆ, ನಂತರ ದೇವಿಗೆ ಅಭಿಷೇಕ ಮಹಾಪೂಜೆ ಹಾಗೂ ಮಧ್ಯಾಹ್ನ 12.30 ರಿಂದ ದೇವಿ ಪ್ರಸಾದ ವಿನಿಯೋಗ ಕಾರ್ಯಕ್ರಮವಿರುತ್ತದೆ.