ರಾಣೇಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ
ರಾಣೇಬೆನ್ನೂರು, ಡಿ. 18 – ಇಂದು ಬೆಳಿಗ್ಗೆ ನಗರದ ನಗರಸಭೆ ಕ್ರೀಡಾಂಗಣಕ್ಕೆ ಭೇಟಿ ಕೊಟ್ಟ ಶಾಸಕ ಪ್ರಕಾಶ ಕೋಳಿವಾಡ ಅವರು ಕ್ರೀಡಾಪಟುಗಳು ಹಾಗೂ ವಾಯು ವಿಹಾರಿಗಳಿಂದ ಅಹವಾಲುಗಳ ಪಡೆದು, ಶಾಸಕರ ಅನುದಾನದ 60 ಹಣದಲ್ಲಿ ವಾಕಿಂಗ್ ಟ್ರ್ಯಾಕ್ ಹಾಗೂ ಗರಡಿ ಮನೆ ಸೇರಿದಂತೆ, ಕ್ರೀಡಾಂಗಣವನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.