ಅಕ್ಕಮಹಾದೇವಿ ಸಮಾಜದಲ್ಲಿ ಇಂದು ಹುಣ್ಣಿಮೆ ಕಾರ್ಯಕ್ರಮ

ಅಕ್ಕಮಹಾದೇವಿ ಸಮಾಜದಲ್ಲಿ  ಇಂದು ಹುಣ್ಣಿಮೆ ಕಾರ್ಯಕ್ರಮ

ದಾವಣಗೆರೆಯ ಶ್ರೀ ಅಕ್ಕಮಹಾದೇವಿ ಸಮಾಜದ ವತಿಯಿಂದ ಇಂದು ಸಂಜೆ 5.30ಕ್ಕೆ  ಹೊಸ್ತಿಲ ಹುಣ್ಣಿಮೆ ಕಾರ್ಯಕ್ರಮ ನಡೆಯಲಿದೆ.

ಅಕ್ಕಮಹಾದೇವಿ ಸಮಾಜದ ಅಧ್ಯಕ್ಷರಾದ ಶ್ರೀಮತಿ ಕಂಚಿಕೇರಿ ಸುಶೀಲಮ್ಮ ಅಧ್ಯಕ್ಷತೆ ವಹಿಸಲಿದ್ದು, ಶ್ರೀಮತಿ ಜ್ಯೋತ್ಸ್ನ  ಶ್ರೀಕಂಠ  ಅವರು ಅಹಲ್ಯಬಾಯಿ  ಹೋಳ್ಕರ್  ಬಗ್ಗೆ  ಮಾತನಾಡಲಿರುವರು.

ಶ್ರೀಮತಿ  ಆಶಾ  ಚಿತ್ರಿಕಿ  ರಸಪ್ರಶ್ನೆ   ನಡೆಸಿಕೊಡುವರು. ಉಪಾಧ್ಯಕ್ಷರಾದ   ಶ್ರೀಮತಿ ನೀಲಗುಂದ  ಜಯಮ್ಮನವರಿಂದ ಚಿಂತನ – ಮಂಥನ, ಕಾರ್ಯದರ್ಶಿ ಶ್ರೀಮತಿ  ದೊಗ್ಗಳ್ಳಿ ಸುವರ್ಣಮ್ಮ ಉಪಸ್ಥಿತರಿರುವರು ಎಂದು ಇಂದಿನ ಹೊಸ್ತಿಲ ಹುಣ್ಣಿಮೆ  ಸಂಚಾಲಕರಾದ ಶ್ರೀಮತಿ ಶಾಂತ ಮೆಡ್ಲೇರಿ, ಶ್ರೀಮತಿ  ವೀಣಾ  ಕಾಯಿ ಅವರುಗಳು ತಿಳಿಸಿದ್ದಾರೆ.

error: Content is protected !!